ಸಹೋದರಿಯ ಸ್ನೇಹಿತೆಯನ್ನೇ ಪಟಾಯಿಸಿ ಮದ್ವೆಯಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್ ಈತ! ಆದ್ರೆ ವಿವಾಹದ ಬಳಿಕ ಇಬ್ಭಾಗವಾಯ್ತಂತೆ ಮನೆ!!
ರವೀಂದ್ರ ಜಡೇಜಾ ಮೈದಾನದಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರುವ ಅಪ್ರತಿಮ ಆಟಗಾರ. ಬ್ಯಾಟಿಂಗ್, ಬೌಲಿಂಗ್ ಅಥವಾ ಫೀಲ್ಡಿಂಗ್ ಆಗಿರಲಿ, ಈ ಆಟಗಾರ ಮೈದಾನದಲ್ಲಿ ಆಕ್ರಮಣಕಾರಿಯಾಗಿ ಪ್ರದರ್ಶನ ತೋರುತ್ತಾರೆ.
ಇನ್ನು ಜಡೇಜಾ ಅವರ ದಾಂಪತ್ಯವೂ ಹಲವಾರು ಏರುಪೇರುಗಳಿಂದ ಕೂಡಿತ್ತು. ಮದುವೆಯ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದ ಅವರು, ಇತ್ತೀಚೆಗೆ ಕೂಡ ಕೆಲ ಆರೋಪಗಳನ್ನು ಎದುರಿಸಿದ್ದರು.
ರವೀಂದ್ರ ಜಡೇಜಾ ಏಪ್ರಿಲ್ 2016 ರಲ್ಲಿ ರಿವಾಬಾ ಸೋಲಂಕಿ ಅವರನ್ನು ವಿವಾಹವಾದರು. ಈ ಪ್ರೇಮಕಥೆಯು ಅರೇಂಜ್ಡ್ ಮ್ಯಾರೇಜ್ ರೂಪದಲ್ಲಿಯೇ ಇದೆ. ಅಂದರೆ ಜಡೇಜಾ ಕುಟುಂಬವು ಅವರಿಗೆ ಶೀಘ್ರದಲ್ಲೇ ಮದುವೆ ಮಾಡಲು ನಿಶ್ಚಯಿಸಿದ್ದರು. ಅದೇ ಸಮಯದಲ್ಲಿ, ಜಡೇಜಾ ಅವರ ಕುಟುಂಬವು ತಮ್ಮ ಮಗನಿಗೆ ತಮ್ಮ ಮಗಳ ಸ್ನೇಹಿತರೊಬ್ಬರನ್ನು ಮದುವೆ ಮಾಡಿಸುವುದಾಗಿ ಯೋಚಿಸಿತು.
ಜಡೇಜಾ ಸಹೋದರಿ ನೈನಾ ತನ್ನ ಸ್ನೇಹಿತೆ ರಿವಾಬಾನನ್ನು ಜಡ್ಡುಗೆ ಪರಿಚಯಿಸಿದ್ದಳು. ಇವರಿಬ್ಬರೂ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದು, ಈ ಭೇಟಿಯ ವೇಳೆ ಜಡ್ಡು ರಿವಾಬಾಗೆ ಮನಸೋತಿದ್ದರು ಎನ್ನಲಾಗಿದೆ. ಇದಾದ ನಂತರವೇ ಇಬ್ಬರೂ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಇಲ್ಲಿಂದಲೇ ಇವರಿಬ್ಬರ ಪ್ರೀತಿ ಶುರುವಾಗಿದ್ದು, ವಿಷಯ ಮದುವೆಗೆ ತಲುಪಿತ್ತು.
ಜಡೇಜಾ ಮತ್ತು ರಿವಾಬಾ ಮೊದಲ ಭೇಟಿಯಾದ ಮೂರು ತಿಂಗಳೊಳಗೆ ನಿಶ್ಚಿತಾರ್ಥ ಮಾಡಿಕೊಂಡರು. ಇದಾದ ನಂತರ ಇಬ್ಬರೂ ಮದುವೆಯಾದರು. ಮದುವೆಯ ದಿನದಂದು ಜಡೇಜಾ ಗುಲಾಬಿ ಬಣ್ಣದ ಶೇರ್ವಾನಿ ಧರಿಸಿದ್ದ ರಾಜಕುಮಾರನಂತೆ ಕಂಡರೆ, ರಿವಾಬಾ ಸಾಂಪ್ರದಾಯಿಕ ಕೆಂಪು, ಹಸಿರು ಮತ್ತು ಕಿತ್ತಳೆ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದರು.
ಮದುವೆಯಾದ ಒಂದು ವರ್ಷದ ನಂತರ ರವೀಂದ್ರ ಜಡೇಜಾ ತಂದೆಯಾದರು. ಈ ದಂಪತಿಗೆ ನಿಧ್ಯಾನಾ ಎಂಬ ಹೆಣ್ಣು ಮಗುವಿದ್ದು, ಆಗಾಗ್ಗೆ ತಮ್ಮ ಮಗಳೊಂದಿಗಿನ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.
ಅಂದಹಾಗೆ ರಿವಾಬಾ ಅವರ ತಂದೆ ಉದ್ಯಮಿ ಮತ್ತು ತಾಯಿ ರೈಲ್ವೆ ಖಾತೆ ವಿಭಾಗದಲ್ಲಿದ್ದಾರೆ. ರಿವಾಬಾ ರಾಜ್‌ಕೋಟ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದು, ಪ್ರಸ್ತುತ ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಶಾಸಕಿಯೂ ಹೌದು.
ಆದರೆ ಇತ್ತೀಚೆಗೆಯಷ್ಟೇ ಜಡೇಜಾ ಅವರ ತಂದೆ, ತಮ್ಮ ಸೊಸೆ ಮೇಲೆ ಆರೋಪ ಹೊರಿಸಿದ್ದು, “ಆ ಮದುವೆಯ ಬಳಿಕ ಮನೆ ಇಬ್ಭಾಗವಾಯಿತು. ನಮ್ಮ ನಡುವೆ ಯಾವುದೇ ಮಾತುಕತೆ ಇಲ್ಲ” ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ರವೀಂದ್ರ ಜಡೇಜಾ ತಮ್ಮ ಕುಟುಂಬಕ್ಕೆ ತಿರುಗೇಟು ನೀಡಿ, ಇದು ತೇಜೋವಧೆ ಮಾಡುವ ಉದ್ದೇಶ ಎಂದು ಆಕ್ರೋಶ ಹೊರಹಾಕಿದ್ದರು.