ಓದಿದ್ದು 8ನೇ ಕ್ಲಾಸ್, ಕ್ರಿಕೆಟ್’ಗಾಗಿ ವಿದ್ಯಾಭ್ಯಾಸವನ್ನೇ ತೊರೆದ ಈತ ಇಂದು IPL ತಂಡವೊಂದರ ಕ್ಯಾಪ್ಟನ್! ಕೋಟಿ ಕೋಟಿ ಆಸ್ತಿಯ ಒಡೆಯ
11 ಅಕ್ಟೋಬರ್ 1993 ರಂದು ಗುಜರಾತ್’ನ ಚೋರಾಯಸಿಯಲ್ಲಿ ಜನಿಸಿದ ಹಾರ್ದಿಕ್ ಪಾಂಡ್ಯ, ಇದೀಗ ಟೀಂ ಇಂಡಿಯಾದ ಪ್ರಮುಖ ಆಟಗಾರನಾಗಿದ್ದಾರೆ. ನಾವಿಂದು ಈ ವರದಿಯಲ್ಲಿ ಹಾರ್ದಿಕ್ ಪಾಂಡ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹುಟ್ಟು ಬಡಕುಟುಂಬದಿಂದಲೇ ಬೆಳೆದುಬಂದ ಹಾರ್ದಿಕ್ ಪಾಂಡ್ಯಗೆ ಬಾಲ್ಯದಿಂದಲೂ ಕ್ರಿಕೆಟ್ ಅಂದ್ರೆ ಪಂಚಪ್ರಾಣ. ಹಿರಿಯ ಸಹೋದರ ಕೃನಾಲ್ ಪಾಂಡ್ಯ ಕ್ರಿಕೆಟ್ ಆಡಲು ಹೋಗುತ್ತಿದ್ದಾಗ, ಅವರ ಜೊತೆ ಹಾರ್ದಿಕ್ ಕೂಡ ಮೈದಾನಕ್ಕೆ ಹೋಗಿ ಮೋಜು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೃನಾಲ್ ಕೋಚ್ ಕಿರಣ್ ಮೋರೆ ಅವರ ಸಲಹೆ ಮೇರೆಗೆ ಹಾರ್ದಿಕ್ ಕೂಡ ಕ್ರಿಕೆಟ್ ಆಡಲು ಆರಂಭಿಸಿದರು. ಮೊದಲ ಮೂರು ವರ್ಷ ಕೋಚಿಂಗ್ ಫೀಸ್ ಕೂಡ ತೆಗೆದುಕೊಂಡಿರಲಿಲ್ಲ.
ಹಾರ್ದಿಕ್ ಪಾಂಡ್ಯಗೆ ಬಾಲ್ಯದಿಂದಲೂ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ. 9ನೇ ತರಗತಿ ಕೂಡ ಪೂರ್ಣಗೊಳಿಸದೆ ಕ್ರಿಕೆಟ್ ಕಡೆ ಹೆಚ್ಚಿನ ಗಮನ ನೀಡಲು ಪ್ರಾರಂಭಿಸಿದರು.
ಮಾಧ್ಯಮ ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ 9 ನೇ ತರಗತಿ ಪರೀಕ್ಷೆ ಕೂಡ ಬರೆದಿಲ್ಲ. ಹೀಗಾಗಿ ಅವರ ಶೈಕ್ಷಣಿಕ ಅರ್ಹತೆ ಕೇವಲ 8 ನೇ ತರಗತಿ.
ಕ್ರಿಕೆಟ್’ಗಾಗಿ ವಿದ್ಯಾಭ್ಯಾಸವನ್ನೇ ತೊರೆದ ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್. ಅದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಅವರು ತಮ್ಮ ತಂಡವನ್ನು ಒಂದು ಬಾರಿ ಚಾಂಪಿಯನ್ ಮಾಡಿದ್ದರೆ, ಮತ್ತೊಂದು ಬಾರಿ ಫೈನಲ್ ಪ್ರವೇಶಿಸುವಂತೆ ಮಾಡಿದ್ದರು.
ಇನ್ನು ಸ್ಪೋರ್ಟ್ಸ್ ಕೀಡಾದಲ್ಲಿ ಉಲ್ಲೇಖಿಸಿರುವಂತೆ, ಹಾರ್ದಿಕ್ ಪಾಂಡ್ಯ ಅವರ ನಿವ್ವಳ ಮೌಲ್ಯ ಸುಮಾರು 91 ಕೋಟಿ ಅಂದರೆ $ 11 ಮಿಲಿಯನ್.