Health Benefits of Almonds: ಹೃದಯದ ಆರೋಗ್ಯಕ್ಕೆ ಪ್ರತಿದಿನ ಬಾದಾಮಿ ಸೇವಿಸಿರಿ
ಬಾದಾಮಿಯು ವಿಟಮಿನ್ A, B ಮತ್ತು E ಸೇರಿದಂತೆ ಹಲವಾರು ಜೀವಸತ್ವಗಳನ್ನು ಹೊಂದಿದೆ. ಜೊತೆಗೆ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಂ, ರಂಜಕ, ಸತು, ಪೊಟ್ಯಾಸಿಯಂ, ಸೆಲೆನಿಯಂ ಮತ್ತು ಫೋಲಿಕ್ ಆಮ್ಲದಂತಹ ಅಗತ್ಯ ಪೋಷಕಾಂಶಗಳು ಮತ್ತು ಖನಿಜಗಳನ್ನು ಹೊಂದಿದೆ.
ಬಾದಾಮಿ ಮೆದುಳಿನ ಆರೋಗ್ಯ ಹೆಚ್ಚಿಸಲು ತುಂಬಾ ಒಳ್ಳೆಯದು. ಇದು ಕ್ಯಾಲ್ಸಿಯಂ ಮತ್ತು ರಂಜಕದಲ್ಲಿ ಸಮೃದ್ಧವಾಗಿದ್ದು, ನಿಮ್ಮ ಮೂಳೆಗಳು & ಹಲ್ಲುಗಳನ್ನು ಬಲಪಡಿಸಲು ಸಹಕಾರಿ.
ಬಾದಾಮಿ ಹಾಲಿನಲ್ಲಿ ವಿಟಮಿನ್ E ಸಮೃದ್ಧವಾಗಿರುವ ಕಾರಣ ಮೂಳೆಗಳನ್ನು ಬಲಗೊಳಿಸುತ್ತದೆ. ಇದು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯಾಘಾತವನ್ನು ತಡೆಯುತ್ತದೆ.
ಬಾದಾಮಿಯು ಕೆಟ್ಟ ಕೊಲೆಸ್ಟ್ರಾಲ್ ತೆಗೆದುಹಾಕುವ ಸಾಮರ್ಥ್ಯ ಹೊಂದಿದೆ. ಇದು ರಕ್ತದೊತ್ತಡದಲ್ಲಿನ ಏರಿಳಿತವನ್ನು ತಡೆಯುತ್ತದೆ ಮತ್ತು ದೇಹದ ಚಯಾಪಚಯ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತದೆ.
ಬಾದಾಮಿಯು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ತ್ವಚೆಯನ್ನು ಪೋಷಿಸಲು ಸಹ ಸಹಕಾರಿಯಾಗಿದೆ.