Health Benefits of Basil: ತುಳಸಿಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ
ತುಳಸಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ತುಳಸಿಯು ಆಂಟಿ-ಆಕ್ಸಿಡೆಂಟ್ಸ್ & ಫೈಟೋನ್ಯೂಟ್ರಿಯಂಟ್ಸ್‌ಗಳನ್ನು ಹೊಂದಿದ್ದು, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ತುಳಸಿಯು ಮಾನಸಿಕ ಒತ್ತಡ ಮತ್ತು ಕಳವಳವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಪ್ರತಿದಿನವೂ ಒಂದೆರಡು ತುಳಸಿ ಎಲೆಯನ್ನು ಜಗಿದು ಸೇವಿಸಬೇಕು. ತುಳಸಿ ರಸ ಸೇವನೆಯಿಂದ ಹಲವಾರು ಖಾಯಿಲೆಗಳಿಂದ ಮುಕ್ತಿ ಹೊಂದಬಹುದು.
ತುಳಸಿಯು ಶೀತ, ಕೆಮ್ಮು, ಆಸ್ತಮಾ ಮೊದಲಾದ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಪ್ರತಿದಿನವೂ ತುಳಸಿ ಸೇವನೆಯನ್ನು ರೂಢಿಸಿಕೊಳ್ಳುವುದು ಸಮಗ್ರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ತುಳಸಿಯು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ತುಳಸಿ ಸೇವನೆಯಿಂದ ನೀವು ಹಲವಾರು ಕಾಯಿಲೆಗಳಿಂದ ದೂರವಿರಬಹುದು. ತುಳಸಿ ಎಲೆ, ತುಳಸಿ ರಸ ಅಥವಾ ತುಳಸಿ ಕಷಾಯ ಮಾಡಿ ಸೇವಿಸಬೇಕು.
ತುಳಸಿಯ ಸವಿರುಚಿಯಿಂದ ತೈಲವು ಚರ್ಮದ ಸೋಂಕುಗಳು ಮತ್ತು ಇತರ ತ್ವಚಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಚರ್ಮದ ಆರೋಗ್ಯಕ್ಕೆ ತುಳಸಿ ಉತ್ತಮ ರೀತಿಯ ಕೊಡುಗೆ ನೀಡುತ್ತದೆ.