ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ದರವರೆಗೆ ಹಾಲಿನ ಸೇವನೆಯಿಂದ ಆಗುವ ಪ್ರಯೋಜನೆಗಳೇನು..?
Milk Health Benefits: ಪ್ರತಿದಿನ ಹಲವರಿಗೆ ಹಾಲು ಕುಡಿಯುವ ಅಭ್ಯಾಸವಿರುತ್ತದೆ. ಆದರೆ, ಅನೇಕರಿಗೆ ಹಾಲಿನ ಸೇವನೆಯಿಂದ ಏನೆಲ್ಲಾ ಪ್ರಯೋಜನೆಗಳಿವೆ ಎಂಬುದು ತಿಳಿದಿಲ್ಲ, ಹಾಗಾದರೆ ಹಾಲಿನ ಸೇವನೆಯಿಂದ ಯಾವೆಲ್ಲಾ ಪ್ರಯೋಜನೆಗಳಿವೆ? ತಿಳಿಯಲು ಮುಂದೆ ಓದಿ...
ಮೂಳೆಯ ಆರೋಗ್ಯ:ಹಾಲಿನ ಸೇವನೆಯು ಮೂಳೆಗಳಿಗೆ ಅವಶ್ಯಕವಾದ ಕ್ಯಾಲ್ಸಿಯಂ ಅಂಶ ಮತ್ತು ರಂಜಕದ ಅಂಶವನ್ನು ನೀಡುವ ಉತ್ತಮ ವಸ್ತುವಾಗಿದೆ, ಹಾಲು ಕುಡಿಯುವುದರಿಂದ ಮಾನವರಿಗೆ ಬಲವಾದ ಮೂಳೆಗಳು ಮತ್ತು ದೃಡವಾದ ಹಲ್ಲುಗಳನ್ನು ಹೊಂದಲು ಸಹಾಯಕವಾಗುತ್ತದೆ.
ಹೃದಯದ ಆರೋಗ್ಯ: ಹಾಲು ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಪೂರ್ಣ ಕೊಬ್ಬಿನ ಡೈರಿ ಉತ್ಪನ್ನಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ.
ರೋಗನಿರೋಧಕ ವ್ಯವಸ್ಥೆ: ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತ ಹೆಪ್ಪುಗಟುವಿಕೆ ಮತ್ತು ಗಾಯವನ್ನು ಗುಣಪಡಿಸಲು ಸಹಾಯ ನಾಡುತ್ತದೆ.
ತ್ವಚೆಯ ಆರೋಗ್ಯ: ಹಳಾದ ತ್ವಚೆಯ ಕಾಂತಿಯನ್ನು ಹೆಚ್ಚಿಸುವ ಅಂಶವನ್ನು ಹೊದಿದೆ. ಹಾಲಿ ಉತ್ಪನ್ನಗಳಲ್ಲಿರುವ ಪ್ರೊಟೀನ್ ವಯಸ್ಸಾದಂತೆ ಚಮ೯ ತನ್ನ ಸತ್ವವನ್ನು ಕಳೆದುಕೊಳುತ್ತದೆ ಕಳೆದುಕೊಂಡ ಕಾಂತಿಯುತ ಮೃದುವಾದ ತ್ವಚೆಯನ್ನು ಹಾಲಿನಲ್ಲಿ ಪೋಷಕಂಷಗಳು ಸಹಕರಿಸುತ್ತವೆ.
ನಿದ್ರೆ: ಹಾಲು ಟ್ರಿಪ್ಟೊಫಾನ್ ಅನ್ನು ಹೊಂದಿರುತ್ತದೆ, ಇದು ನಿಮ್ಮ ದೇಹವು ಸಿರೊಟೋನಿನ್ ಮತ್ತು ಮೆಲಟೋನಿನ್ ಅನ್ನು ತಯಾರಿಸಲು ಬಳಸುತ್ತದೆ, ಇದು ನಿಮಗೆ ವಿಶ್ರಾಂತಿಯನ್ನು ಮತ್ತು ನಿದ್ರಿಸಲು ಸಹಾಯ ಮಾಡುತ್ತದೆ.ಹಾಗೂ ಖಿನ್ನತೆ ನಿಭಾಯಿಸಲು ಸಹಾಯ ಮಾಡುತ್ತದೆ.
ಹಾಲಿನ ಸೇವನೆಯಿಂದ ಮಾನವನ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಈ ಆಹಾರದಿಂದ ಹೆಚ್ಚಿನ ಶಕ್ತಿ ಬಿಡುಗಡೆಯಾಗುತ್ತದೆ. ಪಾಶಾ೯ವಾಯುವನ್ನು ಕಡಿಮೆ ಮಾಡುತ್ತದೆ.
ಮಾನವನ ದೇಹಕ್ಕೆ ಬೇಕಾದ ಅತಿಮುಖ್ಯವಾದ ಅಂಶವನ್ನು ಹಾಲಿನಿಂದ ಪಡೆಯಬಹುದು ಆ ಒಂದು ವಸ್ತುವೇ ಪ್ರೋಟಿನ್, ಹಾಲು ಮಾನವನ ದೇಹದ ಸಾಮಾನ್ಯ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಹಾಗೂ ಮನುಷ್ಯನ ಮೆದುಳಿನ ಬೆಳವಣಿಗೆಯನ್ನು ಇದು ಬೆಂಬಲಿಸುತ್ತದೆ.
ಹಾಲು ಮತ್ತು ಅದರಲ್ಲಿರುವ ಕೆಲವೊಂದು ವಿಟಮಿನ್ ಗಳ ಸ್ಥೂಲಕಾಯತೆ, ಟೈಪ್ 2 ಡಯಾಬಿಟಿಸ್, ಕೊಲೊನ್, ಮೂತ್ರಕೋಶ, ಗ್ಯಾಸ್ಟ್ರಿಕ್ ಮತ್ತು ಸ್ತನ ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುವುದು.
50 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ವೈದ್ಯರು ಹಾಲನ್ನು ಶಿಫಾರಸು ಮಾಡಬಹುದು,ಆಸ್ಟಿಯೊಪೊರೋಸಿಸ್ ಇದು ಅವರ ಮೂಳೆಗಳನ್ನು ತೆಳ್ಳಗೆ ಮತ್ತು ದಪ್ಪವನ್ನು ಮಾಡುತ್ತದೆ.ಒಂದು ಕಪ್ 1% ಹಾಲು ಸುಮಾರು 305 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ, ಆದ್ದರಿಂದ ಇದು ಈ ಪ್ರಮುಖ ಖನಿಜದ ಉತ್ತಮ ಮೂಲವಾಗಿದೆ.