ಬೇಸಿಗೆಯಲ್ಲಿ ಚಿಲ್ಡ್‌ ಬಿಯರ್ ಕುಡಿದ್ರೆ ಎಷ್ಟೇಲ್ಲಾ ಲಾಭಗಳಿವೆ ಗೊತ್ತೆ..? ಗೊತ್ತಾದ್ರೆ ನೀವು ಕುಡಿಯೋದಂತೂ ಖಚಿತ

Sat, 13 Apr 2024-2:31 pm,

ಆಲ್ಕೋಹಾಲ್ ಸೇವನೆಯು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದ್ದರೂ, ಕೆಲವೊಮ್ಮೆ ಅನೇಕ ಪ್ರಯೋಜನಗಳನ್ನು ಹೊಂದಿರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇತ್ತೀಚಿನ ಅಧ್ಯಯನಗಳು ಡ್ರಗ್ಸ್ ಬಳಕೆಗಿಂತ ಬಿಯರ್ ಕುಡಿಯುವುದರಿಂದ ಕಡಿಮೆ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿವೆ. ವಾಸ್ತವವಾಗಿ ಇತರ ಮಧ್ಯಗಳಿಗೆ ಹೋಲಿಸಿದರೆ ಬಿಯರ್‌ ಅತಿ ಕಡಿಮೆ ಆಲ್ಕೋಹಾಲ್ ಅಂಶವನ್ನು ಹೊಂದಿದೆ.   

ಹೆಚ್ಚು ಬಿಯರ್ ಕುಡಿಯುವುದು ವಿವಿಧ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಯಾವುದೇ ಅಪಾಯ ಕಡಿಮೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹೆಚ್ಚಿನ ಯುವಕರು ಬೇಸಿಗೆಯಲ್ಲಿ ಕೋಲ್ಡ್ ಬಿಯರ್‌ಗಳನ್ನು ಇಷ್ಟಪಡುತ್ತಾರೆ. ವಾಸ್ತವವಾಗಿ, ಬೇಸಿಗೆಯಲ್ಲಿ ತಂಪಾದ ಬಿಯರ್‌ಗಳನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.  

ಬೇಸಿಗೆಯಲ್ಲಿ ಅನೇಕ ಜನರು ಹೃದಯ ಬಡಿತ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಧ್ಯಯನಗಳ ಪ್ರಕಾರ, ಈ ಸಮಯದಲ್ಲಿ ಬಿಯರ್ ಕುಡಿಯುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಹೃದಯದ ಆರೋಗ್ಯವೂ ಸುಧಾರಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ರಕ್ತನಾಳಗಳು ಮತ್ತು ಇತರ ನಾಳಗಳನ್ನು ಆರೋಗ್ಯವಾಗಿಡಲು ತುಂಬಾ ಸಹಕಾರಿಯಾಗಿದೆ.  

ಬಿಯರ್‌ನಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಪರಿಹಾರ ಸಿಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇದಲ್ಲದೇ ಬೇಸಿಗೆಯಲ್ಲಿ ಬಿಯರ್ ಕುಡಿಯುವುದರಿಂದ ಒತ್ತಡವೂ ಕಡಿಮೆಯಾಗುತ್ತದೆ. ಅಲ್ಲದೆ ಕೆಲವರಲ್ಲಿ ನೆನಪಿನ ಶಕ್ತಿಯೂ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.  

ಬಿಯರ್‌ನಲ್ಲಿರುವ ಅಂಶಗಳು ಅಲ್ಝೈಮರ್ ಕಾಯಿಲೆಯಿಂದ ರಕ್ಷಿಸುತ್ತದೆ. ಇದಲ್ಲದೆ, ಕ್ಯಾನ್ಸರ್ ಅಪಾಯವೂ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.  ಬೇಸಿಗೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿಯರ್ ಕುಡಿಯುವುದರಿಂದ ಮಧುಮೇಹದ ಅಪಾಯವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.  

ಪುರುಷರು ಪ್ರತಿದಿನ ಒಂದರಿಂದ ಎರಡು ಗ್ಲಾಸ್ ಬಿಯರ್‌ ಕುಡಿಯಬೇಕು. ಮಹಿಳೆಯರು ದಿನಕ್ಕೆ ಒಂದಕ್ಕಿಂತ ಹೆಚ್ಚು ಗ್ಲಾಸ್ ಬಿಯರ್‌ ಕುಡಿಯಬಾರದು. ಇದನ್ನು ಸರಿಯಾದ ಪ್ರಮಾಣದಲ್ಲಿ ಕುಡಿದರೆ ಮಾತ್ರ ಆರೋಗ್ಯಕ್ಕೆ ಲಾಭ. ಇಲ್ಲವಾದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ ಅಂತ ತಜ್ಞರು ಎಚ್ಚರಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link