ಕಾಫಿಗೆ 1 ಚಮಚ ತುಪ್ಪ ಹಾಕಿ ಕುಡಿದರೆ ದೇಹಕ್ಕಿದೆ ಇಷ್ಟೊಂದು ಪ್ರಯೋಜನ !
ಪ್ರತಿನಿತ್ಯ ಕುಡಿಯುವ ಈ ಕಾಫಿಗೆ ಒಂದು ಚಮಚ ತುಪ್ಪ ಬೆರೆಸಿ ಕುಡಿದರೆ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು.
ತುಪ್ಪದಲ್ಲಿ ಒಮೆಗಾ 3, ಒಮೆಗಾ 6 ಮತ್ತು ಒಮೆಗಾ 9 ನಂತಹ ಉತ್ತಮ ಪ್ರಮಾಣದ ಆರೋಗ್ಯಕರ ಕೊಬ್ಬುಗಳಿವೆ. ಇದರಲ್ಲಿ ಕ್ಯಾಲ್ಸಿಯಂ ಕೂಡ ಹೇರಳವಾಗಿ ಇರುತ್ತದೆ. ಇದರ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒಂದು ಚಮಚ ತುಪ್ಪವನ್ನು ಕಾಫಿಯೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಅದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ತುಪ್ಪದ ಜೊತೆ ಕಾಫಿ ಸೇವನೆಯು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ಇದರಿಂದಾಗಿ ದೇಹದ ಬೊಜ್ಜು ಕಡಿಮೆಯಾಗುತ್ತದೆ. ಅಲ್ಲದೇ ತೂಕ ಇಳಿಕೆಗೂ ಸಹಕಾರಿ.
ಆದ್ದರಿಂದ ಕಾಫಿಯೊಂದಿಗೆ ತುಪ್ಪವನ್ನು ಬೆರೆಸಿ ಕುಡಿಯುವುದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
ಒಂದು ಕಪ್ ಕಾಫಿಯಲ್ಲಿ ಒಂದು ಚಮಚ ತುಪ್ಪವನ್ನು ಮಿಶ್ರಣ ಮಾಡಿ. ಕಾಫಿ ನೊರೆಯಾಗುವವರೆಗೆ ಚೆನ್ನಾಗಿ ಬೀಟ್ ಮಾಡಿ ನಂತರ ಕುಡಿಯಿರಿ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.