ಬರೀ ಹೊಟ್ಟೆಯಲ್ಲಿ ವಾರಕ್ಕೆ ಮೂರಾದ್ರೂ ಪೇರಲ ಎಲೆ ತಿನ್ನಿ… ಈ ಕಾಯಿಲೆಗಳಿಗೆ ಹೇಳಿ ಶಾಶ್ವತವಾಗಿ ಗುಡ್ ಬೈ!
ಪೇರಲ ಎಲೆಗಳು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಅದರಲ್ಲೂ ಮುಂಜಾನೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿದು ನಂತರ ಬರೀ ಹೊಟ್ಟೆಯಲ್ಲಿ ಪೇರಲ ಎಲೆಗಳನ್ನು ತಿಂದರೆ ಸಿಗುವ ಪ್ರಯೋಜನ ಅಷ್ಟಿಷ್ಟಲ್ಲ.
ಪೇರಲ ಎಲೆಗಳಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದೇ ಕಾರಣದಿಂದ ಇವುಗಳನ್ನು ಸೇವಿಸಿದರೆ, ತ್ವಚೆಯ ಜೊತೆಗೆ ಆರೋಗ್ಯವೂ ಅದ್ಭುತವಾಗಿರುತ್ತದೆ.
ಬದಲಾಗುತ್ತಿರುವ ಹವಾಮಾನದಿಂದಾಗಿ, ಜನರು ಬಾಯಿ ಹುಣ್ಣುಗಳ ಸಮಸ್ಯೆಯನ್ನು ಎದುರಿಸುತ್ತಾರೆ. ಇದಕ್ಕೆ ಬೆಸ್ಟ್ ಮನೆಮದ್ದು ಪೇರಲದ ಚಿಗುರು ಅಥವಾ ಎಳತಾಗಿರುವ ಎಲೆ.
ಪೇರಲ ಎಲೆಗಳಲ್ಲಿ ಕ್ವೆರ್ಸೆಟಿನ್ ಮತ್ತು ವಿಟಮಿನ್ ಸಿ ಕಂಡುಬರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ, ಪ್ರತಿದಿನ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ಮಧುಮೇಹಿಗಳು ತಮ್ಮ ಆಹಾರಗಳ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಒಂದು ವೇಳೆ ಪೇರಲ ಎಲೆಗಳನ್ನು ಸೇವಿಸುತ್ತಾ ಬಂದಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
ಅನೇಕ ಜನರು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಪೇರಲ ಎಲೆಯು ರಾಮಬಾಣ ಎಂದೇ ಹೇಳಬಹುದು. ಇದರಲ್ಲಿ ಕಂಡುಬರುವ ಫೈಬರ್ ಮತ್ತು ವಿಟಮಿನ್ಗಳನ್ನು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)