ದಾಸವಾಳ ಹೂವಿನ ಬಳಕೆಯಿಂದ ಈ ರೋಗಗಳಿಂದ ದೂರವಿರಬಹುದು

Mon, 14 Dec 2020-10:15 am,

ನೈಸರ್ಗಿಕ ಔಷಧದ ಬಗ್ಗೆ  ಅಂದರೆ ದೇಹವನ್ನು ಆರೋಗ್ಯವಾಗಿಡಲು ಬಳಸಬಹುದಾದ ಮರಗಳು ಮತ್ತು ಸಸ್ಯಗಳ ಬಗ್ಗೆ ನಾವಿಂದು ಮಾಹಿತಿ ಒದಗಿಸಲಿದ್ದೇವೆ. ಪ್ರಕೃತಿ ನಮ್ಮ ನಿಮ್ಮೆಲ್ಲರ ಜೀವನದ ಒಂದು ಪ್ರಮುಖ ಭಾಗವಾಗಿದೆ. ಪ್ರಕೃತಿ ದತ್ತವಾಗಿ ಸಿಗುವ ವಸ್ತುಗಳ ಬಳಕೆಯಿಂದ ನಾವು ಹಲವು ಆರೋಗ್ಯಕರ ಲಾಭ ಪಡೆಯಬಹುದು. ಅಂತಹ ಸಸ್ಯಗಳಲ್ಲೇ ಒಂದು ಮನೆಯ ಮುಂದೆ, ನಿಮ್ಮ ತೋಟದಲ್ಲಿ ಅಥವಾ ಛಾವಣಿಯ ಮೇಲೆ ಸುಲಭವಾಗಿ ಬೆಳೆಸಲು ಸಾಧ್ಯವಾಗುವ ದಾಸವಾಳ. ಸಾಮಾನ್ಯವಾಗಿ ಈ ಹೂವನ್ನು ಪೂಜೆಗೆ ಬಳಸುತ್ತಾರೆ. ಆದರೆ ಬಹುಶಃ ಈ ಹೂವಿನ ಔಷಧೀಯ ಗುಣಗಳ ಬಗ್ಗೆ ಹಲವರಿಗೆ ತಿಳಿದಿರುವುದಿಲ್ಲ.  ದಾಸವಾಳ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಹೊಟ್ಟೆ ನೋವು ಮತ್ತು ಬಾಯಿ ಹುಣ್ಣುಗಳಂತಹ ಕಾಯಿಲೆಗಳನ್ನು ಗುಣಪಡಿಸುತ್ತದೆ. ದಾಸವಾಳದ ಹೂವು ಸ್ಮರಣೆಯನ್ನು ಹೆಚ್ಚಿಸುವಲ್ಲಿ ಸಹ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಬನ್ನಿ ದಾಸವಾಳದ ಹೂವಿನ ಪ್ರಯೋಜನಗಳನ್ನು ತಿಳಿದುಕೊಳ್ಳೋಣ

(ಫೋಟೊ ಕೃಪೆ: Getty Images)

ದಾಸವಾಳ ಗಿಡದ ಎಲೆಗಳ ಕಷಾಯವನ್ನು ಕುಡಿಯುವ ಮೂಲಕ ಕಫವನ್ನು ಗುಣಪಡಿಸಲಾಗುತ್ತದೆ. ದಾಸವಾಳದ ಎಲೆಗಳು ಕಫ ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ.

ದಾಸವಾಳ ಗಿಡದ ಎಲೆಗಳನ್ನು ಪುಡಿಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದಿಲ್ಲ. ದಾಸವಾಳದ ಹೂವು ಕೂದಲನ್ನು ಬುಡದಿಂದ ದೃಢವಾಗಿಸಲು ಸಹಾಯ ಮಾಡುತ್ತದೆ.

ದಾಸವಾಳದ ಹೂವು ಸ್ಮರಣೆಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ದಾಸವಾಳದ ಹೂವಿನ ಪುಡಿಯನ್ನು ಪ್ರತಿದಿನ ಹಾಲಿನೊಂದಿಗೆ ಸೇವಿಸುವುದರಿಂದ ಮೆಮೊರಿ ಹೆಚ್ಚಾಗುತ್ತದೆ.

ದಾಸವಾಳದ ಎಲೆಗಳ ರಸವು ಹೊಟ್ಟೆನೋವು ಗುಣಪಡಿಸಲು ಪರಿಣಾಮಕಾರಿಯಾಗಿದೆ. 

ದಾಸವಾಳವು ಬಾಯಿ ಹುಣ್ಣಿನಿಂದ ಪರಿಹಾರ ನೀಡುತ್ತದೆ. ದಾಸವಾಳ ಸಸ್ಯದ ಎಲೆಗಳನ್ನು ಅಗಿಯುವುದರಿಂದ ಬಾಯಿಯ ಹುಣ್ಣುಗಳು ಗುಣವಾಗುತ್ತವೆ.

ದಾಸವಾಳ ಗಿಡದ ಎಲೆಗಳ ಚಹಾ ಅಧಿಕ ರಕ್ತದೊತ್ತಡ ಇರುವ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಹೈ ಬಿಪಿಯನ್ನು ನಿಯಂತ್ರಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link