Health Benefits of Jaggery: ಬೆಲ್ಲವನ್ನು ಸೇವಿಸುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ

Sat, 23 Mar 2024-12:06 am,

ಬೆಲ್ಲವು ಪೊಟ್ಯಾಸಿಯಮ್, ಮೆಗ್ನೀಸಿಯಮ್ & ಸೋಡಿಯಂನಂತಹ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ. ಇದರಿಂದ ದೇಹದಲ್ಲಿ ದ್ರವ ಸಮತೋಲನ ಕಾಪಾಡಿಕೊಳ್ಳಲು, ದೇಹ ತಂಪಾಗಿಸಲು ಮತ್ತು ನಿರ್ಜಲೀಕರಣ ತಡೆಯಲು ಸಹಾಯ ಮಾಡುತ್ತದೆ.

ಬೆಲ್ಲವನ್ನು ತಿನ್ನುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ. ಇದು ಯಕೃತ್ತನ್ನು ಶುದ್ಧಗೊಳಿಸುತ್ತದೆ ಜೊತೆಗೆ ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಅನ್ನನಾಳ, ಶ್ವಾಸಕೋಶ ಮತ್ತು ಕರುಳನ್ನು ಶುದ್ಧೀಕರಿಸುವ ಕೆಲಸ ಮಾಡುತ್ತದೆ. 

ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಆಹಾರದಲ್ಲಿ ಬೆಲ್ಲವನ್ನು ಸೇರಿಸಿಕೊಳ್ಳಬಹುದು. ಇದರಲ್ಲಿರುವ ಪೊಟ್ಯಾಸಿಯಮ್ ಎಲೆಕ್ಟ್ರೋಲೈಟ್‌ಅನ್ನು ಸಮತೋಲನಗೊಳಿಸುತ್ತದೆ. ಚಯಾಪಚಯವನ್ನು ಹೆಚ್ಚಿಸುವುದರಿಂದ ನೀವು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. 

ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಹೊಂದಿರುವ ಬೆಲ್ಲ ಸೇವಿಸುವುದು ಮೂಳೆಗಳ ಆರೋಗ್ಯಕ್ಕೂ ಉತ್ತಮ. ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲಬದ್ಧತೆ ತಡೆಯಲು ಪ್ರತಿದಿನ ಸ್ವಲ್ಪ ಬೆಲ್ಲ ತಿನ್ನುವುದು ಒಳ್ಳೆಯದು. ಕಬ್ಬಿಣಾಂಶ ಮತ್ತು ಫೋಲೇಟ್ ಹೇರಳವಾಗಿರುವ ಬೆಲ್ಲ ತಿನ್ನುವುದರಿಂದ ಕಬ್ಬಿಣದ ಕೊರತೆ ಸರಿಪಡಿಸಬಹುದು. ಇದರ ಸೇವನೆಯಿಂದ ರಕ್ತಹೀನತೆಯನ್ನು ಸಹ ತಡೆಯಬಹುದು.

ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಬೆಲ್ಲವನ್ನು ಆಹಾರದಲ್ಲಿ ಸೇರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಬೆಲ್ಲವನ್ನು ಸೇವಿಸುವುದರಿಂದ ಮಲಬದ್ಧತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link