Health Benefits of Millet: ರಾಗಿ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು
ರಾಗಿಯಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆ ಸಮಸ್ಯೆ ನಿವಾರಿಸಲು ಸಹಕಾರಿಯಾಗಿದೆ. ಅಕ್ಕಿ ಮತ್ತು ಬೇರೆ ಧಾನ್ಯಗಳಿಗೆ ಹೋಲಿಕೆ ಮಾಡಿದರೆ ರಾಗಿಯಲ್ಲಿ ನಾರಿನಾಂಶವು ಹೆಚ್ಚಾಗಿದೆ. ಇದರಿಂದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳೂ ದೂರವಾಗುತ್ತದೆ. ರಾಗಿಯಲ್ಲಿ ಪಾಲಿಫೆನಾಲ್ ಅಂಶವಿದ್ದು, ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.
ರಾಗಿಯಲ್ಲಿ ಕ್ಯಾಲ್ಸಿಯಂ ಅಂಶವು ಸಮೃದ್ಧವಾಗಿದ್ದು, ಇದು ಅಸ್ಥಿರಂಧ್ರತೆ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಮಕ್ಕಳಿಗೆ ನಿಯಮಿತವಾಗಿ ರಾಗಿ ನೀಡಿದರೆ ಅವರ ಮೂಳೆಗಳು ಮತ್ತು ಹಲ್ಲುಗಳು ಬಲಿಷ್ಠವಾಗುತ್ತವೆ. ಬೆಳೆಯುತ್ತಿರುವ ಮಕ್ಕಳಿಗೆ ರಾಗಿ ನೀಡಿದರೆ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ.
ಪ್ರತಿನಿತ್ಯ ರಾಗಿಯನ್ನು ಬಳಕೆ ಮಾಡಿದರೆ ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆ ದೂರವಾಗುತ್ತದೆ. ಇದರಲ್ಲಿರುವ ಅಮಿನೊ ಆಮ್ಲವು ನೈಸರ್ಗಿಕ ಖಿನ್ನತೆ ನಿವಾರಕವಾಗಿ ಕೆಲಸ ಮಾಡುತ್ತದೆ. ಮೈಗ್ರೇನ್ ಸಮಸ್ಯೆ ಎದುರಿಸುತ್ತಿರುವವರಿಗೆ ರಾತಿ ತುಂಬಾ ಒಳ್ಳೆಯದು.
ರಾಗಿಯಲ್ಲಿರುವ ಕಬ್ಬಿಣಾಂಶವು ರಕ್ತಹೀನತೆ ನಿವಾರಣೆ ಮಾಡಲು ನೆರವಾಗುತ್ತದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಣೆ ಮಾಡುತ್ತದೆ. ಇದರಲ್ಲಿ ನೈಸರ್ಗಿಕ ಕಬ್ಬಿಣಾಂಶ ಮತ್ತು ವಿಟಮಿನ್ ‘ಸಿ’ ಇದ್ದು, ಕಬ್ಬಿಣಾಂಶವು ಬೇಗನೆ ಹೀರಿಕೊಳ್ಳುತ್ತದೆ.
ರಾಗಿಯಲ್ಲಿ ಲೆಸಿಥಿನ್ ಮತ್ತು ಮೆಥಿಯೋನಿನ್ ಅನ್ನೋ ಅಮಿನೊ ಆಮ್ಲವಿದ್ದು, ಇದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಇದು ಯಕೃತ್‍ಗೆ ಕೊಬ್ಬು ಕರಗಿಸಲು ನೆರವಾಗುವುದು. ಟ್ರೈಪ್ಟೊಫಾನ್ ಅನ್ನೋ ಅಮಿನೊ ಆಮ್ಲವು ಹಸಿವನ್ನು ತಗ್ಗಿಸುತ್ತದೆ.