Mustard Oil : ಚಳಿಗಾಲದ ಈ ಸಮಸ್ಯೆಗಳಿಗೆ ಸಾಸಿವೆ ಎಣ್ಣೆಯಲ್ಲಿದೆ ಮದ್ದು
ಚಳಿಗಾಲದಲ್ಲಿ ನೆಗಡಿ, ಜ್ವರ, ವೈರಲ್ ಜ್ವರ, ಸ್ಕಿನ್ ರಾಶಸ್ ಮೊದಲಾದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ಮನೆಯಲ್ಲೂ ಬಳಸುವ ಸಾಸಿವೆ ಎಣ್ಣೆಯು ತುಂಬಾ ಪರಿಣಾಮಕಾರಿಯಾಗಿದೆ.
ಉಗುರುಬೆಚ್ಚಗಿನ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಚಳಿಗಾಲದಲ್ಲಿ ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ.
ಸಾಸಿವೆ ಎಣ್ಣೆ ಚಳಿಗಾಲದಲ್ಲಿ ಔಷಧಿಯಂತೆ ಕೆಲಸ ಮಾಡುತ್ತದೆ. ಇದು ಸಾಮಾನ್ಯ ಕಾಯಿಲೆಗಳು ಮತ್ತು ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಸಾಸಿವೆ ಎಣ್ಣೆ ಕೀಲು ನೋವಿನಿಂದ ಮುಕ್ತಿ ನೀಡುತ್ತದೆ. ಸಾಸಿವೆ ಎಣ್ಣೆ ಮಸಾಜ್‌ನಿಂದ ನೀವು ಪರಿಹಾರವನ್ನು ಪಡೆಯಬಹುದು.
ಸಾಸಿವೆ ಎಣ್ಣೆಯಿಂದ ಎದೆ ಭಾಗಕ್ಕೆ ಮಸಾಜ್ ಮಾಡುವುದರಿಂದ ಎದೆಯಲ್ಲಿ ಸಂಗ್ರಹವಾದ ಕಫದಿಂದ ಪರಿಹಾರ ದೊರೆಯುತ್ತದೆ. ಮೂಗು ಕಟ್ಟಿಕೊಂಡರೆ ಬಿಸಿನೀರಿನಲ್ಲಿ ಸಾಸಿವೆ ಎಣ್ಣೆ ಹಾಕಿ ಸ್ಟೀಮ್ ತೆಗೆದುಕೊಳ್ಳಿ.
ಸಾಸಿವೆ ಎಣ್ಣೆಯಲ್ಲಿ ಬೆಳ್ಳುಳ್ಳಿ ಹಾಕಿ, ಸ್ವಲ್ಪ ಸಮಯ ಬೇಯಿಸಿ ನಂತರ ಅದನ್ನು ಒಂದು ಪಾತ್ರೆಯಲ್ಲಿ ಇರಿಸಿ ಮತ್ತು ಪ್ರತಿ ರಾತ್ರಿ ಮಲಗುವ ಮೊದಲು ನಿಮ್ಮ ಮೂಗಿನಲ್ಲಿ ಕೆಲವು ಹನಿಗಳನ್ನು ಹಾಕಿದರೆ, ಶೀತದಿಂದ ಬೇಗನೆ ಪರಿಹಾರ ಪಡೆಯಬಹುದು.
ಸಾಸಿವೆ ಎಣ್ಣೆಯಲ್ಲಿ ಆಹಾರವನ್ನು ಬೇಯಿಸಿ. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಉಗುರುಬೆಚ್ಚಗಿನ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಸಂಧಿವಾತದಿಂದ ಪರಿಹಾರವನ್ನು ನೀಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕೈ ಕಾಲುಗಳ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.