ಪಪ್ಪಾಯಿ ಹಾಲಿನಿಂದ ಏನೆಲ್ಲಾ ಪ್ರಯೋಜನೆಗಳಿವೆ ನಿಮಗೆ ಗೊತ್ತಾ..? ನೋಡಿ ಶಾಕ್ ಆಗ್ತೀರಾ..!
ಹಸಿ ಪಪ್ಪಾಯಿಯಿಂದ ಸಿಗುವ ಹಾಲನ್ನು ಲ್ಯಾಟೆಕ್ಸ್ ಎಂದು ಕರೆಯಲಾಗುತ್ತದೆ ಇದು ಔಷಧೀಯ ಗುಣಗಳನ್ನು ಹೊಂದಿದೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ.
ಅಲ್ಯೂಮಿನಿಯಂ ಟ್ರೇ ಮೂಲಕ ಈ ಹಾಲನ್ನು ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ನಂತರ ಸಂಸ್ಕರಿಸಲ್ಪಡುತ್ತದೆ.
ವಿಟಮಿನ್ ಎ ಮತ್ತು ಸಿ ಜೊತೆಗೆ, ಪೊಟ್ಯಾಸಿಯಮ್ ಮತ್ತು ಡಯೆಟರಿ ಫೈಬರ್ ಅನ್ನು ಸಹ ಪಪ್ಪಾಯಿ ಹಾಲು ಒಳಗೊಂಡಿದೆ. ಇದು ಜೀರ್ಣಕ್ರಿಯೆಯಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ.
ಪಪ್ಪಾಯಿಯಲ್ಲಿರುವ ಪಪೈನ್ ಎಂಬ ವಸ್ತುವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪಪ್ಪಾಯಿಯ ಹಾಲನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ರೋಗಗಳ ವಿರುದ್ಧ ಹೋರಾಡಲು ಪ್ರತಿರಕ್ಷಣಾ ವ್ಯವಸ್ಥೆಯು ಬಲವಾಗಿರಬೇಕು. ಪಪ್ಪಾಯಿಯಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚಿಸಿ ಸೋಕುಗಳ ವಿರುದ್ಧ ಹೋರಾಡಲು ಇಮ್ಯೂನಿಟಿಯನ್ನು ಹೆಚ್ಚಿಸುತ್ತದೆ.