Health Benefits Of Rudraksha - ಆಧ್ಯಾತ್ಮದಿಂದ ವಿಜ್ಞಾನದವರೆಗೆ ಎಲ್ಲರೂ ಒಪ್ಪಿಕೊಂಡ `ರುದ್ರಾಕ್ಷದ` ಲಾಭಗಳಿವು

Wed, 09 Jun 2021-10:08 pm,

1. ವಿಜ್ಞಾನವು ಒಪ್ಪಿಕೊಂಡಿದೆ (Scientific Benefits Of Wearing Rudraksha)-ಪ್ರಾಚೀನ ಧಾರ್ಮಿಕ ಗ್ರಂಥಗಳಲ್ಲಿರುದ್ರಾಕ್ಷಕ್ಕೆ ಭಾರಿ ಮಹತ್ವ ಕಲ್ಪಿಸಲಾಗಿದೆ. ಇತರ ಮಹಾನ್ ಉಪಚಾರ ಹಾಗೂ ವೈಜ್ಞಾನಿಕ ಗುಣಗಳ ಕಾರಣ ಇದು ಕೇವಲ ದೊಡ್ಡ ದೊಡ್ಡ ರೋಗಗಳನ್ನು ನಿವಾರಿಸುವುದಲ್ಲದೆ ನಮ್ಮ ಮನಸ್ಸು ಹಾಗೂ ಶರೀರದ ಮೇಲೂ ಕೂಡ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಇಂಟರ್ನ್ಯಾಷನಲ್ ಯುನಿವರ್ಸಿಟಿ ಆಫ್ ಫ್ಲೋರಿಡಾದ (International University Of Florida) ವಿಜ್ಞಾನಿಗಳ ಪ್ರಕಾರ, ರುದ್ರಾಕ್ಷ ಮೆದುಳಿಗೆ ತುಂಬಾ ಲಾಭಕಾರಿಯಾಗಿದೆ. ಇದರಲ್ಲಿ ಇಲೆಕ್ಟ್ರೋ ಮ್ಯಾಗ್ನೆಟಿಕ್ ಶಕ್ತಿ (Electromagnetic Power) ಇರುತ್ತದೆ. ಇದರಿಂದ ಇದು ನಮ್ಮ ಶರೀರದ ಮೇಲೆ ಆಶರ್ಯಕಾರಕ ಪ್ರಭಾವ ಬೀರುತ್ತದೆ.

2. ಹೃದ್ರೋಗಿಗಳಿಗೆ (Heart Patients) ಲಾಭಕಾರಿ - ರುದ್ರಾಕ್ಷ ಧರಿಸುವುದರಿಂದ ಶಾರೀರಿಕ ಹಾಗೂ ಮಾನಸಿಕ ಶಕ್ತಿ ಲಭಿಸುತ್ತದೆ ಎಂದು ಭಾವಿಸಲಾಗುತ್ತದೆ ಹಾಗೂ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆ. ರುದ್ರಾಕ್ಷ ಶರೀರವನ್ನು ಸ್ಥಿರಗೊಳಿಸಿ, ಹೃದಯ ಮತ್ತು ಇಂದ್ರೀಯಗಳ ಮೇಲೆ ಪ್ರಭಾವ ಬೀರಿ ಸಮಸ್ಯೆಗಳನ್ನು ಪರಿಹರಿಸುತ್ತದೆ. ಒಂದು ಮುಖದ ರುದ್ರಾಕ್ಷ ಅತ್ಯಂತ ವಿರಳವಾಗಿ ಲಭಿಸುತ್ತದೆ ಹಾಗೂ ತುಂಬಾ ಲಾಭಕಾರಿಯಾಗಿದೆ. ಇದರ ಬೆಲೆಯೂ ಕೂಡ ಹೆಚ್ಚಾಗಿರುತ್ತದೆ. ಹೃದ್ರೋಗ ನಿವಾರಣೆಗೆ ಏಕಮುಖಿ ರುದ್ರಾಕ್ಷ ತುಂಬಾ ಲಾಭಕಾರಿ ಭಾವಿಸಲಾಗುತ್ತದೆ. ಇದು ದೇಹದ ರಕ್ತ ಸಂಚಾರ ಸುಲಲಿತಗೊಳಿಸುತ್ತದೆ.

3. ಬ್ಲಡ್ ಪ್ರೆಶರ್ (Blood Pressure) -ಆಧ್ಯಾತ್ಮಿಕ ಗುರು ಸದ್ಗುರು ಅವರು ಹೇಳುವ ಪ್ರಕಾರ, ಪಂಚಮುಖಿ ರುದ್ರಾಕ್ಷ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಎಲ್ಲರಿಗೂ ಕೂಡ ಉಪಯುಕ್ತ ಎನ್ನಲಾಗುತ್ತದೆ. ಇದು ಸಾಮಾನ್ಯ ಖುಷಿ ಹಾಗೂ ಆರೋಗ್ಯ ಒದಗಿಸುತ್ತದೆ. ಇದನ್ನು ಧರಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದರಿಂದ ನರಗಳು ಶಾಂತಗೊಂಡು, ನರಮಂಡಲ ಜಾಗರೂಕವಾಗಿರುತ್ತದೆ.  

4. ಮನಃಶಾಂತಿ (Peace)- ಸದ್ಗುರು ಅವರು ಹೇಳುವ ಪ್ರಕಾರ 14 ವರ್ಷಕ್ಕಿಂತ ಚಿಕ್ಕಮಕ್ಕಳಿಗೆ ಶಾನ್ಮುಖಿ ಅಂದರೆ, ಆರು ಮುಖಗಳ ರುದ್ರಾಕ್ಷ ಧರಿಸಬೇಕು. ಇದು ಅವರನ್ನು ಶಾಂತಗೊಳಿಸಿ ಅವರಲ್ಲಿ ಏಕಾಗ್ರತೆ ಹೆಚ್ಚಿಸುತ್ತದೆ.

5. ರುದ್ರಾಕ್ಷದ ಆಯಸ್ಕಾಂತೀಯ ಲಾಭಗಳು (Magnetic Benefits Of Rudraksha) - ತನ್ನ ಡೈನಾಮಿಕ್ ಧ್ರುವೀಕರಣ ಗುಣಗಳ ಕಾರಣ ರುದ್ರಾಕ್ಷ ಒಂದು ಆಯಸ್ಕಾಂತದಂತೆ ಕಾರ್ಯನಿರ್ವಹಿಸುತ್ತದೆ. ಇದು ತನ್ನ ಆಯಸ್ಕಾಂತೀಯ ಗುಣಗಳ ಕಾರಣ ಶರೀರದ ನರಗಳಲ್ಲಿರುವ ಅಡೆತಡೆಗಳನ್ನು ದೂರಗೊಳಿಸುತ್ತದೆ. ಶರೀರದಲ್ಲಾಗುವ ಯಾವುದೇ ನೋವು ಹಾಗೂ ಕಾಯಿಲೆ ನಿವಾರಿಸುವ ಶಕ್ತಿ ಇದೆ.

6. ನಕಾರಾತ್ಮಕ ಶಕ್ತಿಯಿಂದ (Negative Energy) ರಕ್ಷಿಸುತ್ತದೆ -ಸದ್ಗುರು ಹೇಳುವ ಪ್ರಕಾರ ರುದ್ರಾಕ್ಷ, ನಕಾರಾತ್ಮಕ ಶಕ್ತಿಗಳ ವಿರುದ್ಧ ಒಂದು ಕವಚದ ರೀತಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಡೈಇಲೆಕ್ಟ್ರಿಕ್ ಗುಣಗಳಿರುತ್ತವೆ. ಇವು ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆದು ಸಂಗ್ರಹಿಸಿಟ್ಟುಕೊಳ್ಳಲು ಹೆಸರುವಾಸಿಯಾಗಿವೆ. ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ನಾವು ಒತ್ತಡದಲ್ಲಿರುವಾಗ ನಮ್ಮ ಶರೀರ ಅತಿ ಹೆಚ್ಚು ಶಕ್ತಿಯನ್ನು ಉತ್ಪಾದಿಸುತ್ತದೆ. ಆ ಶಕ್ತಿಯನ್ನು ನಾವು ಖರ್ಚು ಮಾಡದೆ ಹೋದಲ್ಲಿ ರಕ್ತದೊತ್ತದೆ, ಚಿಂತೆ, ಅತಿಸಾರದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಇಂತಹುದರಲ್ಲಿ ರುದ್ರಾಕ್ಷ ಮಾಲೆ ಈ ಅನಾವಶ್ಯಕ ಶಕ್ತಿಯನ್ನು ಸ್ಥಿರಗೊಳಿಸಿ, ನರಮಂಡಲವನ್ನು ಸುಧಾರಿಸುತ್ತದೆ ಹಾಗೂ ಹಾರ್ಮೋನ್ ಗಳಲ್ಲಿ ಸಂತುಲನ ತರಲು ಸಹಕರಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link