ಚಿಕ್ಕಬಳ್ಳಾಪುರಕ್ಕೆ ಬೇಟಿ ನೀಡಿದ ಆರೋಗ್ಯ ಸಚಿವ ಕೆ. ಸುಧಾಕರ್‌..!

Tue, 21 Mar 2023-3:22 pm,

ಚಿಕ್ಕಬಳ್ಳಾಪುರ ನಗರದಿಂದ ಬೆಂಗಳೂರಿಗೆ ಸಂಚರಿಸಲು ನೂತನವಾಗಿ ಆರಂಭಿಸಲಾಗಿರುವ ಬಿಎಂಟಿಸಿ ಬಸ್ ಸೇವೆಗೆ ನಗರದ ಹಳೆ ಬಸ್ ಸ್ಟ್ಯಾಂಡ್ ಆವರಣದಲ್ಲಿ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.  

ಚಿಕ್ಕಬಳ್ಳಾಪುರ ಜನತೆಯ ಬಹುದಿನಗಳ ಕನಸು ಇಂದು ನನಸಾಗಿದ್ದು, ನಗರದ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಪರ್ವ ಆರಂಭವಾಗಿದೆ.  

ಬಿಎಂಟಿಸಿ ಬಸ್ಸುಗಳ ಓಡಾಟದಿಂದ ದಿನನಿತ್ಯ ಬೆಂಗಳೂರಿಗೆ ಓಡಾಡುವ ರೈತರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಉದ್ಯೋಗಿಗಳಿಗೆ ಅನುಕೂಲವಾಗಲಿದ್ದು, ಜಿಲ್ಲೆಯ ಆರ್ಥಿಕ ಪ್ರಗತಿಗೂ ವೇಗ ದೊರೆಯಲಿದೆ.  

ಆರಂಭದಲ್ಲಿ ಪ್ರಾಯೋಗಿಕವಾಗಿ ಎರಡು ಬಸ್ಸುಗಳಿಗೆ ಚಾಲನೆ ದೊರೆತಿದ್ದು ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಕೆ. ಸುಧಾಕರ್‌ ಹೇಳಿದ್ದಾರೆ.   

ಚಿಕ್ಕಬಳ್ಳಾಪುರ ನಗರದಲ್ಲಿ ಇಂದು ನಡೆದ ನೂತನವಾಗಿ ನಿರ್ಮಿಸಿರುವ 'ಎತ್ತಿನ ಬಂಡಿ' ಕಲಾಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.   

ಎತ್ತಿನ ಬಂಡಿಗಳು ನೂರಾರು ವರ್ಷಗಳಿಂದ ನಮ್ಮ ಗ್ರಾಮೀಣ ಜೀವನದ ಅವಿಭಾಜ್ಯ ಅಂಗವಾಗಿವೆ. ನಗರದಲ್ಲಿ ನಿರ್ಮಿಸಿರುವ 'ಎತ್ತಿನ ಬಂಡಿ' ಕಲಾಕೃತಿಯು ನಮ್ಮ ಹೆಮ್ಮೆಯ ಪರಂಪರೆಯನ್ನು ಸಾರುವಂತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link