Health Tips: ಕ್ಯಾರೆಟ್ ನ ಈ 6 ಆರೋಗ್ಯ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು…

Thu, 26 Aug 2021-4:57 pm,

ನಿಮ್ಮ ಕಣ್ಣಿನ ದೃಷ್ಟಿ ಸುಧಾರಿಸಲು ಬಯಸಿದರೆ ಕ್ಯಾರೆಟ್ ಗಿಂತ ಉತ್ತಮವಾದದ್ದು ಯಾವುದೂ ಇಲ್ಲ. ಕ್ಯಾರೆಟ್ ವಿಟಮಿನ್ A ನ ಉತ್ತಮ ಮತ್ತು ನೈಸರ್ಗಿಕ ಮೂಲವಾಗಿದ್ದು ಅದು ಆರೋಗ್ಯಕರ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ನಲ್ಲಿ ಲುಟೀನ್ ಮತ್ತು ಲೈಕೋಪೀನ್ ಸಮೃದ್ಧವಾಗಿದ್ದು, ಇದು ಉತ್ತಮ ದೃಷ್ಟಿ ಮತ್ತು ರಾತ್ರಿ ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನೀವು ತೂಕ ಇಳಿಸಬಯಸಿದರೆ ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಬೇಕು. ಕರಗಬಲ್ಲ ಮತ್ತು ಕರಗದ ನಾರುಗಳಿರುವ ಕ್ಯಾರೆಟ್ ನಾರಿನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ ಮತ್ತು ಆರೋಗ್ಯಕರ ಆಹಾರಕ್ಕೆ ಸೂಕ್ತವಾಗಿದೆ.  

ಕ್ಯಾರೆಟ್‌ನಲ್ಲಿರುವ ಗಮನಾರ್ಹ ಪ್ರಮಾಣದ ಆಹಾರದ ಫೈಬರ್ ಉತ್ತಮ ಜೀರ್ಣಕಾರಿ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿ ಕಲ್ಮಶವನ್ನು ಹೊರಹಾಕಲು ನೆರವಾಗುತ್ತದೆ. ಇದಲ್ಲದೆ ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ.

ಕ್ಯಾರೆಟ್ ನ ಅಧಿಕ ಫೈಬರ್ ಅಂಶವು ಅಪಧಮನಿಗಳು ಮತ್ತು ರಕ್ತನಾಳಗಳ ಹೆಚ್ಚುವರಿ LDL ಕೊಲೆಸ್ಟ್ರಾಲ್ ತೆಗೆದುಹಾಕುವ ಮೂಲಕ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಕ್ಯಾರೆಟ್ ದೇಹದಲ್ಲಿ ಸುಲಭವಾಗಿ ಹೀರಿಕೊಳ್ಳುವ ಕ್ಯಾಲ್ಸಿಯಂ ಹೊಂದಿದ್ದು ಅದು ಅನಾರೋಗ್ಯಕರ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕ್ಯಾರೆಟ್ ನಿಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ. ಬೀಟಾ ಕ್ಯಾರೋಟಿನ್, ಲುಟೀನ್ ಮತ್ತು ಲೈಕೋಪೀನ್ ಹೊರತುಪಡಿಸಿ, ಇದರಲ್ಲಿರುವ ಅಧಿಕ ಸಿಲಿಕಾನ್ ಅಂಶವು ಆರೋಗ್ಯಕರ ಚರ್ಮಕ್ಕೆ ಸಹಾಯ ಮಾಡುತ್ತದೆ.   

ಕ್ಯಾರೆಟ್‌ಗಳಲ್ಲಿ ಪೊಟ್ಯಾಸಿಯಂ ತುಂಬಿದೆ. ಇದು ನಿಮ್ಮ ರಕ್ತನಾಳಗಳು ಮತ್ತು ಅಪಧಮನಿಗಳಲ್ಲಿನ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link