Health Benefits of Garlic: ಹಲವಾರು ಕಾಯಿಲೆಗಳಿಗೆ ಬೆಳ್ಳುಳ್ಳಿ ರಾಮಬಾಣ!
ಹಲವಾರು ರೋಗಗಳಿಗೆ ರಾಮಬಾಣವಾಗಿರುವ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಿದರೆ ಹೆಚ್ಚು ಪ್ರಯೋಜನವಿದೆ. ಅಡುಗೆಯಲ್ಲಿ ಬಳಸಿದರೂ ನೀವು ಆರೋಗ್ಯ ಪ್ರಯೋಜನ ಪಡೆಯುತ್ತೀರಿ. ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿ ಬೆಳ್ಳುಳ್ಳಿ ಕೆಲಸ ಮಾಡುತ್ತದೆ.
ಬೆಳಗ್ಗೆ ಎದ್ದಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದು. ಕೊಲೆಸ್ಟ್ರಾಲ್ ಇಳಿಕೆಗೆ ಇದು ತುಂಬಾ ಸಹಾಯ ಮಾಡುತ್ತದೆ.
ಮಧುಮೇಹಿಗಳು ದಿನನಿತ್ಯ 1 ಬೆಳ್ಳುಳ್ಳಿ ತಿನ್ನುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಬೆಳ್ಳುಳ್ಳಿ ನಿಯಮಿತವಾಗಿ ಸೇವಿಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಬೆಳ್ಳುಳ್ಳಿ ಹಸಿವು ಹೆಚ್ಚಿಸುವ ಕೆಲಸ ಮಾಡುತ್ತದೆ. ಬೊಜ್ಜು ನಿವಾರಕವಾಗಿಯೂ ಇದು ಕೆಲಸ ಮಾಡುತ್ತದೆ.ಬೆಳಗ್ಗೆ ಬೆಳ್ಳುಳ್ಳಿ ಸೇವಿಸಿದ 1 ಗಂಟೆಯಲ್ಲಿ ಜೀರ್ಣವಾಗಿ ಆರೋಗ್ಯ ವೃದ್ಧಿ ಮಾಡುತ್ತದೆ.
ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಸ್ಮರಣ ಶಕ್ತಿ ಹೆಚ್ಚಿಸುವ ವಿಶೇಷ ಗುಣ ಇದರಲ್ಲಿದೆ. ಆಯುರ್ವೇದಲ್ಲಿ ಬೆಳ್ಳುಳ್ಳಿಗೆ ವಿಶೇಷ ಸ್ಥಾನವಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಅನೇಕ ಸಂಶೋಧನೆಗಳು ಸಹ ಬೆಳಕು ಚೆಲ್ಲಿವೆ.