Health Tips: ಹತ್ತಾರು ಕಾಯಿಲೆಗಳಿಗೆ ಸಂಜೀವಿನಿ ಹೊಂಗೆ ಮರ
ನಿಮಗೆ ಮಂಡಿ ನೋವು/ಹಿಮ್ಮಡಿ ನೋವು/ಕೀಲು ನೋವು ಇದ್ದರೆ ಬಿಸಿ ಮಾಡಿದ ಹೊಂಗೆ ಎಣ್ಣೆಯಲ್ಲಿ ಪಚ್ಚ ಕರ್ಪೂರ ಬೆರೆಸಿ ಹೆಚ್ಚಬೇಕು. ಚರ್ಮ ರೋಗಗಳಲ್ಲಿ ಇದರ ಎಣ್ಣೆಯಲ್ಲಿ ಲಿಂಬೆ ರಸವನ್ನು ಬೆರೆಸಿ ಹಚ್ಚಬೇಕು.
ಕೂದಲು ಉದುರುತ್ತಿದ್ದರೆ ಹೊಂಗೆಮರದ ಹೂವುಗಳನ್ನು ಅರೆದು ಹಚ್ಚುವುದರಿಂದ ಪರಿಹಾರ ಸಿಗುತ್ತದೆ. ಹೊಂಗೆ ಎಣ್ಣೆ ಹಚ್ಚುವುದರಿಂದ ಗಾಯಗಳು ಬೇಗನೆ ವಾಸಿಯಾಗುತ್ತವೆ.
ಮಧುಮೇಹದಲ್ಲಿ 10-15MLನಷ್ಟು ಎಲೆಗಳ ರಸವನ್ನು ಸೇವಿಸಬಹುದು. ಹುರುಕು ರೋಗವಿದ್ದರೆ ಇದರ ಬೇರು ತೇಯ್ದು ಹಚ್ಚಬೇಕು.
ನೀವು ಹೆಚ್ಚು ಕೆಮ್ಮುತ್ತಿದ್ದರೆ 10MLನಷ್ಟು ಇದರ ಬೇರು ಅಥವಾ ಬೀಜಗಳ ಕಷಾಯವನ್ನು ಕುಡಿದರೆ ಪರಿಹಾರ ದೊರೆಯುತ್ತದೆ.
ತುರಿಕೆ, ಕಜ್ಜಿ ಇತ್ಯಾದಿ ಚರ್ಮ ರೋಗವಿದ್ದರೆ ಹೊಂಗೆ ಬೀಜಗಳನ್ನು ತೇಯ್ದು ಹಚ್ಚಬಹುದು ಅಥವಾ ಹೊಂಗೆ ಎಣ್ಣೆಯನ್ನು ಹಚ್ಚಬಹುದು.