Health Tips: ‘ಅಲೋವೆರಾ ಜ್ಯೂಸ್ʼ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು
ಅಲೋವೆರಾದಲ್ಲಿ ವಿಟಮಿನ್ ‘B’ ಹೇರಳವಾಗಿದ್ದು, ಇದು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯಿಂದ ನೀವು ಸುಲಭವಾಗಿ ದೇಹದ ತೂಕ ಕಳೆದುಕೊಳ್ಳಬಹುದು. ಅಲೋವೆರಾ ಸೇವನೆಯಿಂದ ಹೊಟ್ಟೆ ಹಸಿವು ತಗ್ಗುತ್ತದೆ. ಇದು ಸಹ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
ಅಲೋವೆರಾ ಅಥವಾ ಲೋಳೆಸರ ಜ್ಯೂಸ್ ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿಯಾಗಿದೆ. ಇದರಲ್ಲಿನ ಕಿಣ್ವಗಳು ಹಾಗೂ ನಾರುಗಳು ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುವ ಜೊತೆಗೆ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಮಲಬದ್ಧತೆಯಂತಹ ಗಂಭೀರ ಸಮಸ್ಯೆಗೆ ಅಲೋವೆರಾ ಜ್ಯೂಸ್ ಪರಿಣಾಮಕಾರಿ ಔಷಧವಾಗಿದೆ.
ಕಾಂತಿಯುತ ಚರ್ಮ ಹಾಗೂ ಸುಂದರ ಕೂದಲಿಗೆ ಅಲೋವೆರಾ ಉತ್ತಮ ಕೊಡುಗೆ ನೀಡುತ್ತದೆ. ನಿಯಮಿತವಾಗಿ ಅಲೋವೆರಾ ಜ್ಯೂಸ್ ಸೇವನೆಯಿಂದ ಚರ್ಮ ಕಾಂತಿಯುತವಾಗಿ ಹೊಳೆಯುತ್ತದೆ. ಅದರಂತೆ ಕೂದಲಿನ ಉತ್ತಮ ಬೆಳವಣಿಗೆ ಸುಧಾರಿಸುವಲ್ಲೂ ಸಹ ಇದು ಸಹಕಾರಿ. ಕೂದಲು ಉದುರುವ ಸಮಸ್ಯೆಗೆ ಇದು ಮುಕ್ತಿ ನೀಡುತ್ತದೆ.
ಜಂಕ್‍ಫುಡ್ ಸೇವನೆ ಮತ್ತು ಬದಲಾದ ಜೀವನಶೈಲಿಯಿಂದ ದೇಹದಲ್ಲಿ ವಿಷಕಾರಿ ಅಂಶ ಸೇರಿಕೊಂಡಿರುತ್ತದೆ. ಅಲೋವೆರಾ ಜ್ಯೂಸ್ ವಿಷಕಾರಿ ಅಂಶಗಳನ್ನು ಹೊರಹಾಕಿ ನಿಮ್ಮ ದೇಹವನ್ನು ಶುದ್ಧವಾಗಿಡುತ್ತದೆ. ಅಜೀರ್ಣಕಾರಿ ಕಾಯಿಲೆಗಳನ್ನು ಇದು ಪರಿಣಾಮಕಾರಿಯಾಗಿ ಶಮನಗೊಳಿಸುತ್ತದೆ.
ಬಾಯಿಯ ದುರ್ವಾಸನೆಯಿಂದ ಬಳಲುತ್ತಿರುವವರಿಗೆ ಅಲೋವೆರಾ ಬಹಳ ಪ್ರಯೋಜನಕಾರಿ. ಅಲೋವೆರಾದಲ್ಲಿ ಸೂಕ್ಷ್ಮಜೀವಿ ಪ್ರತಿರೋಧಕ ಗುಣಗಳು ಒಸಡು ಮತ್ತು ಹಲ್ಲುಗಳನ್ನು ಶುಚಿಯಾಗಿಡುತ್ತದೆ. ಇದರಿಂದ ಬಾಯಿಯ ದುರ್ವಾಸನೆಯನ್ನು ತಡೆಯಬಹುದಾಗಿದೆ.