Cashew Health Benefits: ಪ್ರತಿದಿನ ನಾಲ್ಕೈದು ಗೊಡಂಬಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?
ಗೋಡಂಬಿಯಲ್ಲಿ ಮೆಗ್ನೀಷಿಯಂ, ಝಿಂಕ್, ಕಬ್ಬಿಣ ಹಾಗೂ ಫಾಸ್ಫರಸ್ ಅಂಶ ಹೆಚ್ಚಿರುತ್ತದೆ. ಪ್ರೋಟೀನ್‌ಗಳು ಹಾಗೂ ಸೆಲೆನಿಯಂ ಸೇರಿದಂತೆ ಆ್ಯಂಟಿಆಕ್ಸಿಡೆಂಟ್ಸ್ ಕೂಡ ಹೆಚ್ಚಿರುತ್ತದೆ. ಹೀಗಾಗಿ ಇದು ನಿಮ್ಮ ಚರ್ಮಕ್ಕೆ ಉತ್ತಮ.
ವಾತಾವರಣದಲ್ಲಿ ಹೆಚ್ಚು ಮಾಲಿನ್ಯವಿದ್ದರೆ ಗೋಡಂಬಿ ತಿನ್ನುವುದರಿಂದ ಕಣ್ಣಿನ ಸೋಂಕು ಬರದಂತೆ ನೋಡಿಕೊಳ್ಳುತ್ತದೆ. ಆ್ಯಂಟಿಆಕ್ಸಿಡೆಂಟ್ ಹೊಂದಿರುವ ಗೊಡಂಬಿ ರೆಟಿನಾ ಮೇಲೆ ರಕ್ಷಣಾತ್ಮಕ ಪದರ ಸೃಷ್ಟಿಸಲಿದ್ದು, ಹಾನಿಕರ ಯುವಿ ಕಿರಣಗಳನ್ನು ತಡೆಯುತ್ತದೆ.
ಗೋಡಂಬಿಯಲ್ಲಿ ಒಮೆಗಾ 3 ಅಂಶವಿರುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಹಸಿವಾದಾಗ ಬೊಗಸೆಯಷ್ಟು ಗೋಡಂಬಿ ತಿಂದರೆ ಹೆಚ್ಚುಕಾಲ ಹೊಟ್ಟೆ ತುಂಬುವಂತೆ ನೋಡಿಕೊಳ್ಳುತ್ತದೆ.
ಗೋಡಂಬಿ LDL ಕೊಲೆಸ್ಟರಾಲ್ ಕಡಿಮೆ ಮಾಡಲಿದ್ದು, HDL ಕೊಲೆಸ್ಟರಾಲ್ ಸಾಮಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ರೋಗದ ಅಪಾಯವನ್ನು ದೂರ ಮಾಡುತ್ತದೆ.
ಗೋಡಂಬಿ ಫೈಬರ್ ಅಂಶ ಹೊಂದಿದೆ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗಲಿದ್ದು, ಜೀರ್ಣಾಂಗ ಸಂಬಂಧಿ ರೋಗಗಳನ್ನು ಕಡಿಮೆಯಾಗುತ್ತವೆ. ಹೀಗಾಗಿ ಪ್ರತಿದಿನ ನೀವು ನಾಲ್ಕೈದು ಗೊಡಂಬಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.