Cumin Seeds Benefits: ಜೀರಿಗೆ ಸೇವಿಸಿದ್ರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ
ನೀವು ಸುಲಭವಾಗಿ ದೇಹದ ತೂಕವನ್ನು ಕಳೆದುಕೊಳ್ಳಬೇಕೆ? ಹಾಗಾದ್ರೆ ನಿಯಮಿತವಾಗಿ ಜೀರಿಗೆ ಸೇವಿಸಿ. ಅಧಿಕ ತೂಕ ಹೊಂದಿರುವ ವ್ಯಕ್ತಿಗಳಿಗೆ ಜೀರಿಗೆ ಪರಿಣಾಮಕಾರಿ ಮನೆಮದ್ದು ಎಂದು ಹೇಳಲಾಗಿದೆ. ಅಧಿಕ ತೂಕ ಅಥವಾ ಬೊಮ್ಜು ಹೊಂದಿರುವವರು ಪ್ರತಿದಿನ ಮೊಸರಿನಲ್ಲಿ ಅಥವಾ ನೀರಿನಲ್ಲಿ ಬಿಸಿ ಮಾಡಿಕೊಂಡು ಸೇವಿಸಿದ್ರೆ ಪ್ರಯೋಜ ದೊರೆಯುತ್ತದೆ.
ಇಂದು ಅನೇಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಜೀರಿಗೆ ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ಹಸಿವನ್ನು ಹೆಚ್ಚಿಸುತ್ತದೆ. ಜೀರಿಗೆಯ ಔಷಧೀಯ ಗುಣಗಳು ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಹೀಗಾಗಿ ಮಧುಮೇಹಿಗಳು ಪ್ರತಿದಿನವೂ ಜೀರಿಗೆ ಸೇವಿಸುವುದು ಉತ್ತಮ.
ಅಧುನಿಕ ಜೀವನಶೈಲಿ ಮತ್ತು ಕೆಟ್ಟ ಆಹಾರಪದ್ಧತಿಯಿಂದ ಇಂದು ಅನೇಕರು ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೀರಿಗೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹೊಟ್ಟೆ ನೋವು ಅಥವಾ ಹಸಿವಿನ ಕೊರತೆ ಇದ್ದರೆ ಜೀರಿಗೆಯನ್ನು ಹುರಿದ ಮೊಸರಿನೊಂದಿಗೆ ಬೆರೆಸಿ ಸೇವಿಸಬೇಕು. ಇದರಿಂದ ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ಜೀರಿಗೆಯಲ್ಲಿ ಕಬ್ಬಿಣ, ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಇದರ ಸೇವನೆಯಿಂದ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಇದು ಬಿಳಿ ರಕ್ತ ಕಣಗಳ ಕ್ರಿಯೆಯನ್ನು ಸುಧಾರಿಸುತ್ತದೆ. ಜೀರಿಗೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.
ಒತ್ತಡ ನಿವಾರಿಸಲು ಜೀರಿಗೆ ಸಹಕಾರಿಯಾಗಿದೆ. ಜೀರಿಗೆ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುವ ಮೂಲಕ ಒತ್ತಡದ ಪರಿಣಾಮಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಜೀರಿಗೆಯು ಉಸಿರಾಟ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ.