Health Tips: ದೊಡ್ಡಪತ್ರೆ ಎಲೆಯ ಅದ್ಭುತ ಆರೋಗ್ಯ ಪ್ರಯೋಜನಗಳು
ಮಕ್ಕಳಿಗೆ ಕಫ ಕಟ್ಟಿಕೊಂಡಾಗ ದೊಡ್ಡಪತ್ರೆ ಎಲೆಯನ್ನು ಬಾಡಿಸಿ, ಅದರ ರಸವನ್ನು ಹಿಂಡಿ ಅದನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಎರಡು ಸಲ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಜೊತೆಗೆ ಇದರ ರಸವನ್ನು ಎದೆಯ ಭಾಗಕ್ಕೆ ಒಂದು ವಾರ ದಿನಕ್ಕೆ ಮೂರು ಸಲದಂತೆ ಸವರಿದರೆ ಕಫ ಗುಣವಾಗುತ್ತದೆ.
ದೊಡ್ಡಪತ್ರೆ ಎಲೆಯ ತಂಬುಳಿ ತುಂಬಾ ರುಚಿಕರವಾಗಿರುತ್ತದೆ. ಇದು ಉಬ್ಬಸ ಮತ್ತು ಕೆಮ್ಮಿಗೆ ರಾಮಬಾಣವಾಗಿದೆ. ಇದನ್ನು ಹೆಚ್ಚಾಗಿ ಜ್ವರ, ಶೀತ, ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ.
ದೊಡ್ಡಪತ್ರೆ ಎಲೆ ಮತ್ತು ಅರಿಶಿಣವನ್ನು ಅರೆದು ಮೈಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಿದರೆ ಗಂದೆಗಳು ಮಾಯವಾಗುತ್ತದೆ. ಗಾಯ ಅಥವಾ ಚೇಳು ಕಡಿತಕ್ಕೆ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಬಳಸಲಾಗುತ್ತದೆ
ಜಾಂಡೀಸ್(ಅರಿಶಿಣ ಕಾಮಾಲೆ)ನಿಂದ ನರಳುತ್ತಿರುವವರು ಹತ್ತು ದಿನಗಳ ಕಾಲ ದೊಡ್ಡಪತ್ರೆಯ ಎಲಗಳನ್ನು ದಿನವೂ ತಿಂದರೆ ಕಾಯಿಲೆ ಗುಣವಾಗುತ್ತದೆ.
ದೊಡ್ಡಪತ್ರೆಯ ಹಸಿ ಎಲೆಗಳನ್ನು ಉಪ್ಪಿನ ಜೊತೆಗೆ ಸೇರಿಸಿಕೊಂಡು ಜಗಿದು ತಿಂದರೆ ಜೀರ್ಣಶಕ್ತಿ ಅಧಿಕವಾಗುವುದು ಮತ್ತು ಪಿತ್ತಸಂಬಂಧಿ ಕಾಯಿಲೆಗಳು ದೂರವಾಗುತ್ತವೆ.