Health benefits of Cashew: ಬಾದಾಮಿ ಸೇವನೆಯ ಅದ್ಭುತ ಪ್ರಯೋಜನಗಳು
ದಿನಕ್ಕೆ ಕೇವಲ 5 ಗೋಡಂಬಿ ಸವಿದರೆ ನೀವು ಅನೇಕ ಆರೋಗ್ಯ ಪ್ರಯೋಜನ ಪಡೆಯುತ್ತೀರಿ. ಬೆರಳೆಣಿಕೆಷ್ಟು ಗೋಡಂಬಿಯಲ್ಲಿ ಶೇ.45ರಷ್ಟು ಕ್ಯಾಲೋರಿ, 2 ಗ್ರಾಂ.ನಷ್ಟು ಕಾರ್ಬೋಹೈಡ್ರೇಟ್ ಮತ್ತು 4 ಗ್ರಾಂ.ನಷ್ಟು ಕೊಬ್ಬು, 1 ಗ್ರಾಂ.ನಷ್ಟು ಪ್ರೋಟೀನ್ ಸಿಗುತ್ತದೆ. ಅಧಿಕ ನಾರಿನಂಶ ಹೊಂದಿರುವ ಗೋಡಂಬಿ ಸೇವಿಸಿದರೆ ಹಲವಾರು ಆರೋಗ್ಯಕರ ಲಾಭ ಪಡೆಯಬಹುದು.
ಗೋಡಂಬಿ ಸೇವಿಸುವುದರಿಂದ ಖಿನ್ನತೆ ಮತ್ತು ಆತಂಕದ ಭಾವನೆ ನಿವಾರಣೆಯಾಗುತ್ತದೆ. ಇಂದು ಬಹುತೇಕರು ಒತ್ತಡದ ಜೀವನ ಹಾಗೂ ಆರ್ಥಿಕ ಸ್ಥಿತಿಯಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇಂತವರು ಪ್ರತಿದಿನ ಕೆಲವು ಗೋಡಂಬಿ ಸೇವಿಸುವುದರಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಮಧುಮೇಹಿಗಳು ಮತ್ತು ಕಡಿಮೆ ತೂಕ ಹೊಂದಿರುವರು ಪ್ರತಿದಿನ ಗೋಡಂಬಿ ಸವಿಯಬಹುದು. ಇದರಲ್ಲಿರುವ ಶಕ್ತಿ, ಪ್ರೋಟೀನ್, ಕೊಬ್ಬು ಮತ್ತು ನಾರಿನಂಶವು ದೇಹದ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಾಯ ಮಡುವುದು. ದೇಹದ ತೂಕ ಹೆಚ್ಚಿಸಲು ಇದು ಸಹಕಾರಿ. ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹತೋಟಿಯಲ್ಲಿಡಲು ಸಹ ಸಹಕಾರಿ.
ಗೋಡಂಬಿ ಸಮೃದ್ಧವಾದ ಕ್ಯಾಲೋರಿ ಮತ್ತು ನಾರಿನಂಶ ಒಳಗೊಂಡಿದೆ. ಈ 2 ಅದ್ಭುತ ಗುಣಗಳು ತೂಕ ಇಳಿಕೆಗೆ ಸಹಕಾರಿಯಾಗಿವೆ. ಬೆರಳೆಣಿಕೆಯಷ್ಟು ಗೋಡಂಬಿ ಸವಿದರೆ ಹಸಿವನ್ನು ನಿಯಂತ್ರಿಸಬಹುದು. ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವನ್ನು ಸಹ ಗೋಡಂಬಿ ನೀಡುತ್ತದೆ.
ನಿದ್ರಾಹೀನತೆ ಸಮಸ್ಯೆ ಅನುಭವಿಸುವವರು ರಾತ್ರಿ ಮಲಗುವ ಮುನ್ನ ಬೆರಳೆಣಿಕೆಯಷ್ಟು ಗೋಡಂಬಿ ಸೇವಿಸಬೇಕು. ಆಗ ಉತ್ತಮ ನಿದ್ರೆ ಮಾಡಬಹುದು. ಕ್ರಮೇಣವಾಗಿ ನಿದ್ರಾಹೀನತೆಯ ಸಮಸ್ಯೆ ನಿವಾರಣೆಯಾಗುತ್ತದೆ.