Pineapple Health Benefits: ಬೇಸಿಗೆಯಲ್ಲಿ ಪೈನಾಪಲ್ ಸೇವಿಸಿ ಅನೇಕ ರೋಗಗಳಿಂದ ದೂರವಿರಿ
ಬೇಸಿಗೆಯಲ್ಲಿ ಪೈನಾಪಲ್ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಪೈನಾಪಲ್‌ನಲ್ಲಿ ಪೊಟಾಷ್ಯಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ಫೋಲೆಟ್, ರಂಜಕ, ಸತು, ವಿಟಮಿನ್ ಎ ಮತ್ತು ವಿಟಮಿನ್ ಕೆ, ವಿಟಮಿನ್ ಸಿ ಇದ್ದು, ಇವು ಉತ್ತಮ ಆರೋಗ್ಯಕ್ಕೆ ತುಂಬಾ ಸಹಕಾರಿ.
ತೂಕ ಇಳಿಕೆಗೆ ಪೈನಾಪಲ್ ತುಂಬಾನೇ ಸಹಕಾರಿ. ಪೈನಾಪಲ್ ಸೇವಿಸುವುದರಿಂದ ಮೈ ತೂಕ, ಹೊಟ್ಟೆ ಬೊಜ್ಜು ಸೇರಿದಂತೆ ಅನೇಕ ಸಮಸ್ಯೆಗಳು ಬರದಂತೆ ತಡೆಯಬಹುದು.
ಪೈನಾಪಲ್‍ನಲ್ಲಿರುವ ವಿಟಮಿನ್ ‘ಸಿ’ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ನಾರಿನಂಶ ಅಧಿಕವಿದ್ದು, ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕಲು ಸಹಕಾರಿ. ಪೈನಾಪಲ್ ದೇಹವನ್ನು ಡಿಟಾಕ್ಸ್ ಮಾಡುವುದರಿಂದ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ.
ಪೈನಾಪಲ್‌ನಲ್ಲಿ ವಿಟಮಿನ್ ‘ಸಿ’ ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಕಾರಿ. ಇದರಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಪೈನಾಪಲ್ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಅಜೀರ್ಣ ಸಮಸ್ಯೆ ಇರುವವರು ಆಹಾರದ ಬಳಿಕ ಪೈನಾಪಲ್ ಸೇವಿಸಿದರೆ ಅಜೀರ್ಣ ಸಮಸ್ಯೆ ದೂರಾಗುತ್ತದೆ.