Fennel Seeds: ಗ್ಯಾಸ್ಟ್ರಿಕ್, ಮಲಬದ್ಧತೆ & ಹೃದಯದ ಆರೋಗ್ಯಕ್ಕೆ ಸೋಂಪು ಕಾಳು
ಅಜೀರ್ಣ ಸಮಸ್ಯೆಯಿಂದ ಸಾಮಾನ್ಯವಾಗಿ ಹೊಟ್ಟೆಯುಬ್ಬರ ಉಂಟಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಹೆಚ್ಚಾಗಿ ಸಮಸ್ಯೆ ಹೆಚ್ಚಾಗುತ್ತದೆ. ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಸೇವಿಸುವುದರ ಬದಲು ಮನೆಯಲ್ಲಿಯೇ ಇರುವ ಸೋಂಪು ಕಾಳುಗಳನ್ನು ತಿನ್ನುವುದರಿಂದ ಅಜೀರ್ಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪು ಕಾಳು ಹಾಕಿದ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರಲ್ಲಿ ಫೈಬರ್ ಮತ್ತು ಕಡಿಮೆ ಕ್ಯಾಲೊರಿ ಇರುವುದರಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.
ಸೋಂಪು ಕಾಳಿನ ನೀರು ಕುಡಿಯುವುದರಿಂದ ಅಥವಾ ಸೋಂಪು ಕಾಳುಗಳನ್ನು ಸೇವಿಸುವುದರಿಂದ ಮುಖದಲ್ಲಿನ ಪಿಂಪಲ್ಸ್ ಅಥವಾ ಮೊಡವೆ ಕಡಿಮೆಯಾಗುತ್ತದೆ ಮತ್ತು ಮುಖದ ಹೊಳಪು ಹೆಚ್ಚಾಗುತ್ತದೆ. ಬಾಯಿಯ ದುರ್ವಾಸನೆಯಿಂದಲೂ ಮುಕ್ತಿ ದೊರೆಯುತ್ತದೆ.
ನಿಯಮಿತವಾಗಿ ಸೋಂಪು ಕಾಳುಗಳನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ. ಮೂಳೆಗಳ ಆರೋಗ್ಯಕ್ಕೂ ಸಹ ಸೋಂಪು ಕಾಳುಗಳು ಸಹಕಾರಿಯಾಗಿವೆ. ಗರ್ಭಿಣಿಯರು ಸೋಂಪು ಕಾಳುಗಳನ್ನು ತಿನ್ನುವುದರಿಂದ ಎದೆ ಹಾಲು ಹೆಚ್ಚಾಗುತ್ತದೆ.
ಸೋಂಪು ಕಾಳುಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡವು ನಿಯಂತ್ರಣಕ್ಕೆ ಬರುತ್ತದೆ. ಇದಲ್ಲದೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ. ಹೃದಯದ ಆರೋಗ್ಯಕ್ಕೆ ಸಹ ಸೋಂಪು ಕಾಳುಗಳು ಸಹಕಾರಿಯಾಗಿವೆ.