Health Benefits Of Fenugreek: ಮೆಂತೆ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ
ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿನೀರಿಗೆ 2 ಚಿಟಿಕೆ ಮೆಂತೆ ಪುಡಿ ಹಾಕಿ ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮೆಂತೆಯಲ್ಲಿರುವ ಕ್ಯಾಲ್ಸಿಯಂ ಅಂಶ ಎದೆಯುರಿ ಕಡಿಮೆ ಮಾಡುತ್ತದೆ.
ದೇಹ ತೂಕ ಇಳಿಸಲು ಮೆಂತ್ಯ ಸಹಕಾರಿ. ನೆನೆಸಿಟ್ಟ ಮೆಂತೆ ಕಾಳಿನ ನೀರು ಕುಡಿಯುವುದರಿಂದ ದೇಹದ ತೂಕವನ್ನು ಇಳಿಸಬಹುದು.
ಮಗುವಿಗೆ ಹಾಲು ಉಣಿಸುವ ತಾಯಂದಿರು ಮೆಂತೆ ಸೇವಿಸುವುದರಿಂದ ಎದೆಹಾಲು ಹೆಚ್ಚುತ್ತದೆ. ಹೀಗಾಗಿ ಬಾಣಂತಿಗೆ ಮೆಂತೆ ಮದ್ದು ಮಾಡಿ ನೀಡಲಾಗುತ್ತದೆ.
ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಮೆಂತೆ ಕಾಳು ಅತ್ಯುತ್ತಮ ಮನೆಮದ್ದು. ಇದು ದೇಹದಲ್ಲಿರುವ ಅನಗತ್ಯ ತ್ಯಾಜ್ಯವನ್ನು ಹೊರ ಹಾಕುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.
ಪ್ರತಿದಿನ ಮೆಂತೆ ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಮೆಂತ್ಯ ಹಲವು ರೋಗಗಳಿಂದ ನಮಗೆ ರಕ್ಷಣೆ ನೀಡುತ್ತದೆ.