Ghee Health Benefits: ತುಪ್ಪ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು
ತುಪ್ಪದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ, ಪೋಷಕಾಂಶಗಳಿವೆ. ವೈರಸ್ ಅಥವಾ ಬ್ಯಾಕ್ಟೀರಿಯ ವಿರುದ್ದ ಹೋರಾಡುವ ಗುಣ ಮತ್ತು ಅಂಟಿ ಆಕ್ಸಿಡೆಂಟ್ ಇದರಲ್ಲಿ ಹೇರಳವಾಗಿದೆ. ಊಟದೊಂದಿಗೆ ಸ್ವಲ್ಪ ತುಪ್ಪ ಸೇವಿಸಿದರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ತುಪ್ಪದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ‘ಡಿ’ ಮತ್ತು ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಆರೋಗ್ಯಕರವಾಗಿರಲು ಹಾಗೂ ದೃಢಗೊಳ್ಳಲು ನೆರವಾಗುತ್ತದೆ.
ತುಪ್ಪದ ಸೇವನೆಯಿಂದ ಮಧುಮೇಹ ಮತ್ತು ಹೃದಯದ ರೋಗಗಳನ್ನು ತಡೆಗಟ್ಟಬಹುದು. ಮೂಗಿನಲ್ಲಿ ರಕ್ತ ಬರುವ ಕಾಯಿಲೆ ಇರುವವರು ಮೂಗಿನ ಹೊಳ್ಳೆಗಳ ಒಳಗೆ ತುಪ್ಪ ಹಚ್ಚಿದರೆ ರಕ್ತ ಸೋರುವುದು ನಿಲ್ಲುತ್ತದೆ. ತುಪ್ಪದ ಸೇವನೆಯಿಂದ ಸ್ಮರಣಶಕ್ತಿ ಮತ್ತು ಬುದ್ದಿಮತ್ತೆ ಹೆಚ್ಚಲು ನೆರವಾಗುತ್ತದೆ. ರಾತ್ರಿ ಮಲಗುವ ಮುನ್ನ ಬಿಸಿ ಬಿಸಿ ಹಾಲಿಗೆ ತುಪ್ಪ ಸೇರಿಸಿ ಕುಡಿದರೆ ಉತ್ತಮ ನಿದ್ದೆ ಬರುತ್ತದೆ.
ತುಪ್ಪದಲ್ಲಿ ವಿಟಮಿನ್ ‘ಇ’ ಹೆಚ್ಚಿನ ಪ್ರಮಾಣದಲ್ಲಿದ್ದು, ಕಣ್ಣುಗಳಿಗೆ ಹಾಗೂ ದೃಷ್ಟಿಗೆ ಹೆಚ್ಚಿನ ಪೋಷಣೆ ನೀಡುತ್ತದೆ. ದಿನನಿತ್ಯ ತುಪ್ಪ ಸೇವಿಸಿದರೆ ಕ್ಯಾನ್ಸರ್ ಬರುವ ಪ್ರಮಾಣ ಕಡಿಮೆ ಆಗುತ್ತದೆ. ತುಪ್ಪದಲ್ಲಿ ಮೆಂತ್ಯೆ ಕಾಳು ಹುರಿದು ಪುಡಿ ಮಾಡಿ ಮಜ್ಜಿಗೆಗೆ ಹಾಕಿ ಕುಡಿದರೆ ಪಿತ್ತದಿಂದ ಉಂಟಾದ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ತುಪ್ಪ ಸೇವನೆಯಿಂದ ತ್ವಚೆಯ ಕಾಂತಿ ವೃದ್ಧಿಸುತ್ತದೆ. ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸಿದರೆ ಹಸಿವು ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಕಾಲುಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗಬೇಕೆಂದರೆ ಪ್ರತಿದಿನವೂ ಕೊಂಚ ತುಪ್ಪ ಸೇವಿಸಬೇಕು.
ಹೆರಿಗೆ ನೋವು ಪ್ರಾರಂಭ ಆದ ತಕ್ಷಣ ಬಿಸಿ ಗಂಜಿಗೆ ತುಪ್ಪ ಹಾಕಿ ಸೇವಿಸಿದರೆ ಸುಖ ಪ್ರಸವಕ್ಕೆ ಸಹಕಾರಿಯಾಗುತ್ತದೆ. ಅತಿಯಾದ ಜ್ವರದ ಸಮಯದಲ್ಲಿ ತುಪ್ಪವನ್ನು ಅಂಗೈ, ಪಾದ ಮತ್ತು ಹಣೆಗೆ ಹಚ್ಚಿದರೆ ಜ್ವರ ಬೇಗನೆ ಶಮನವಾಗುತ್ತದೆ.