Benefits of Guava: ಸೀಬೆ ಹಣ್ಣು ಸೇವಿಸುವುದರಿಂದ ಸಿಗುತ್ತೆ ಅದ್ಭುತ ಆರೋಗ್ಯ
ಸೀಬೆ ಹಣ್ಣು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ. ಇದರಲ್ಲಿ ಯಥೇಚ್ಚವಾದ ವಿಟಮಿನ್ C, ಲೈಕೋಪೀನ್ ಮತ್ತು ಆಂಟಿಆಕ್ಸಿಡೆಂಟ್‍ಗಳಿವೆ.
ಸೀಬೆ ಹಣ್ಣು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಉತ್ತಮವಾದ ಚರ್ಮ ಪಡೆಯಲು ಸೀಬೆ ಹಣ್ಣು ಸಹಕಾರಿ.
ಸೀಬೆ ಹಣ್ಣು ಮುಟ್ಟಿನಲ್ಲಿ ಕಾಣಿಸುವ ನೋವಿನ ಲಕ್ಷಣವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಶೇ.೮೦ರಷ್ಟು ನೀರು ಮತ್ತು ಫೈಬರ್ ಗಳಿಂದ ತುಂಬಿದೆ.
ಸೀಬೆ ಹಣ್ಣು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಲ್ಲಿನ ಪೊಟ್ಯಾಶಿಯಮ್ ರಕ್ತದೊತ್ತಡವನ್ನು ಸುಧಾರಿಸುತ್ತದೆ.
ಸೀಬೆ ಹಣ್ಣು ಕ್ಯಾನ್ಸರ್ ವಿರೋಧಿ ಪರಿಣಾಮ ಹೊಂದಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ