Health Benefits of Guava: ಸೀಬೆ ಹಣ್ಣು ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ
ಪೇರಳೆ ಅಥವಾ ಸೀಬೆ ಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. ಪೇರಳೆಯಲ್ಲಿರುವ ವಿಟಮಿನ್ ‘C’ ಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸೀಬೆ ಹಣ್ಣಿನಲ್ಲಿ ವಿಟಮಿನ್ ‘A’ ಹೆಚ್ಚಿರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಸೀಬೆಹಣ್ಣು ಮಳೆಗಾಲದಲ್ಲಿ ಬರುವ ಶೀತ, ನೆಗಡಿ & ಕೆಮ್ಮು ದೂರಮಾಡುತ್ತದೆ. ವಿಟಮಿನ್ ‘ಸಿ’ಗೆ ಕ್ಯಾನ್ಸರ್ ಕಾರಕಗಳನ್ನು ದೂರ ಮಾಡುವ ಶಕ್ತಿಯೂ ಇದೆ. ಸೀಬೆ ಹಣ್ಣಿನ ಬೀಜದ ಸತ್ವವು ಥೈರಾಯಿಡ್ ಗ್ರಂಥಿಗೆ ಆರೋಗ್ಯಕಾರಿಯಾಗಿದೆ.
ಸೀಬೆಕಾಯಿಗೆ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ಇದ್ದು, ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣ ಜೀರ್ಣಾಶಯವನ್ನು ಆರೋಗ್ಯದಿಂದಿಡುತ್ತದೆ. ಪೇರಳೆಯನ್ನು ತಿನ್ನುವುದರಿಂದ ದೇಹದಲ್ಲಿ ಪೊಟಾಶಿಯಂ, ಸೋಡಿಯಂ ಸಮತೋಲನದಲ್ಲಿರುತ್ತದೆ.
ಸೀಬೆ ಹಣ್ಣು ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ತಗ್ಗುತ್ತದೆ. ಅಜೀರ್ಣವಿದ್ದಾಗ, ವಾಂತಿ ಇರುವಾಗ 4 ಸೀಬೆ ಮರದ ಎಲೆಗಳನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಕುದಿಸಿ ಕುಡಿದರೆ ನಿರಾಳರಾಗುತ್ತೀರಿ. ಹಲ್ಲುಗಳ ನಡುವೆ ಕಾಡುವ ಇನ್ಫೆಕ್ಷನ್ ಅನ್ನು ಪರಿಹರಿಸುತ್ತದೆ.
ಸೀಬೆಯಲ್ಲಿನ ಆಂಟಿ ಆಕ್ಸಿಡೆಂಟ್‍ಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ ಒಂದು ಸೀಬೆ ತಿಂದರೆ ಚರ್ಮವೂ ಆರೋಗ್ಯವಾಗಿರುತ್ತದೆ. ಸೀಬೆ ಮರದ ಎಲೆಗಳಿಂದ ತಯಾರಿಸುವ ಟೀ ಕುಡಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಒಂದೇ ಹದದಲ್ಲಿ ಇರುತ್ತದೆ. ಬಾಯಿಯಲ್ಲಿನ ಅಲ್ಸರ್, ಹುಣ್ಣುಗಳಂತಹ ಅನಾರೋಗ್ಯಗಳನ್ನು ದೂರ ಇಡುವಲ್ಲಿಯೂ ಇದು ಸಹಕಾರಿ.