Health Tips: ಪುರುಷರ ʼಆʼ ಸಮಸ್ಯೆಗೆ ಮುಕ್ತಿ ನೀಡುತ್ತೆ ಹುರುಳಿಕಾಳು
ಹುರುಳಿ ಕಾಳು ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಹುರುಳಿ ಸೊಪ್ಪಿನಲ್ಲಿ ರಂಜಕ, ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಕಬ್ಬಿಣದ ಗುಣಗಳು ಸಮೃದ್ಧವಾಗಿವೆ.
ಹುರುಳಿ ಕಾಳು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಪ್ರೊಟೀನ್ ಹಾಗೂ ಫೈಬರ್ ಅನ್ನು ಹೊಂದಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ತುಂಬಾ ಪರಿಣಾಮಕಾರಿ.
ಹುರುಳಿ ಕಾಳು ಪುರುಷರ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕಡಿಮೆ ವೀರ್ಯಾಣು ಸಂಖ್ಯೆಯ ಸಮಸ್ಯೆ ಹೊಂದಿರುವ ಪುರುಷರಿಗೂ ಈ ಹುರುಳಿ ಕಾಳು ಉಪಯುಕ್ತವಾಗಿದೆ.
ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಕೆಲವು ದಿನಗಳವರೆಗೆ ಹುರುಳಿ ಕಾಳು ನಿಯಮಿತವಾಗಿ ಸೇವಿಸಿದರೆ ಪರಿಹಾರ ಸಿಗುತ್ತದೆ.
ಮಧುಮೇಹದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಹುರುಳಿ ಕಾಳು ಸಹಾಯಕವಾಗಿದೆ.