Health Benefits of Peanuts: ಶೇಂಗಾದ ಅದ್ಭುತ ಆರೋಗ್ಯ ಪ್ರಯೋಜನಗಳು
ಶೇಂಗಾವನ್ನು ಬಡವರ ಬಾದಾಮಿ ಎನ್ನಲಾಗುತ್ತದೆ. ಬಾದಾಮಿಯಲ್ಲಿ ಹೇರಳ ಪೋಷಕಾಂಶಗಳಿವೆ. ಶೇಂಗಾದಲ್ಲಿ ಏಕ ಮತ್ತು ಬಹು ಅಸಂತೃಪ್ತ ಕೊಬ್ಬುಗಳು (Mono and Polyunsaturated Fats) ಹೆಚ್ಚಿನ ಪ್ರಮಾಣದಲ್ಲಿದೆ. ಇದು ನಮ್ಮ ಆರೋಗ್ಯಕ್ಕೆ ಅವಶ್ಯಕ ಪೋಷಕಾಂಶಗಳಾಗಿವೆ.
ಶೇಂಗಾದಲ್ಲಿ ವಿಟಮಿನ್ ಇ, ಬಿ 1, ಬಿ 3 ಮತ್ತು ಬಿ 9 ಮತ್ತು ಮೆಗ್ನೀಸಿಯಂ, ರಂಜಕ ಮತ್ತು ತಾಮ್ರದಂತಹ ಖನಿಜಗಳೂ ಉತ್ತಮ ಪ್ರಮಾಣದಲ್ಲಿವೆ. ಇವುಗಳು ನಿಮ್ಮ ಆರೋಗ್ಯಕ್ಕೆ ಉತ್ತಮ ಪೋಷಕಾಂಶಗಳಾಗಿವೆ.
ಶೇಂಗಾ ಸೇವನೆಯ ಬಳಿಕ ಹೆಚ್ಚುಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೀಗಾಗಿ ಶೇಂಗಾ ಸೇವನೆ ತೂಕ ಇಳಿಕೆಗೆ ಉತ್ತಮ ಆಯ್ಕೆಯಾಗಿದೆ.
ಶೇಂಗಾ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಾಧ್ಯ. ಇದು ನಿಮ್ಮ ಹೃದಯಕ್ಕೆ ಅದ್ಭುತ ಆರೋಗ್ಯ ಪ್ರಯೋಜನ ನೀಡುತ್ತದೆ. ಶೇಂಗಾ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಂಡು ಆರೋಗ್ಯವೂ ಉತ್ತಮವಾಗಿರುತ್ತದೆ. ಇದು ಹೃದ್ರೋಗದ ಅಪಾಯದಿಂದ ನಿಮ್ಮನ್ನು ರಕ್ಷಿಸುತ್ತದೆ.
ಪೋಷಕಾಂಶ ಸಮೃದ್ಧ ಆಹಾರವಾಗಿರುವ ಶೇಂಗಾ ನಿಮ್ಮ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ವಿವಿಧ ರೋಗಗಳನ್ನು ತಡೆಗಟ್ಟಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವನ್ನು ಸಹ ಹೊಂದಿವೆ.