Health benefits of Turmeric: ಅರಿಶಿನದ ಅದ್ಭುತ ಆರೋಗ್ಯ ಪ್ರಯೋಜನಗಳು
ರಾತ್ರಿ ಮಲಗುವ ಮುನ್ನ ಹಾಲಿಗೆ ಚಿಟಿಕೆ ಅರಿಶಿನ ಬೆರೆಸಿ ಕುಡಿದರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಉತ್ತಮ. ನಿಯಮಿತವಾಗಿ ಅರಿಶಿನದ ಹಾಲು ಸೇವನೆಯಿಂದ ನಿಮಗೆ ಹಲವಾರು ಪ್ರಯೋಜನಗಳಿವೆ.
ಅರಿಶಿನವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗಾಯಕ್ಕೆ ಚಿಟಿಕೆ ಅರಿಶಿನ ಪುಡಿ ಉದುರಿಸಿದರೆ ಸಾಕು ಶೀಘ್ರವೇ ಗಾಯ ವಾಸಿಯಾಗುತ್ತದೆ. ಅರಿಶಿನವು ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ.
ಅರಿಶಿನವು ಜ್ವರ, ಕಫ, ಕೆಮ್ಮು, ಅಸ್ತಮಾ ಸಮಸ್ಯೆಯನ್ನು ದೂರ ಮಾಡುತ್ತದೆ. ಪ್ರತಿದಿನ ಆಹಾರದಲ್ಲಿ ಅರಿಶಿನವನ್ನು ಬಳಸಿದರೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಅರಿಶಿನದ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ, ಹೊಟ್ಟೆ ನೋವು ಕಡಿಮೆಯಾತ್ತದೆ ಮತ್ತು ಯಕೃತ್ತಿನ ಕಾರ್ಯ ಸುಧಾರಿಸುತ್ತದೆ.
ನಿಯಮಿತವಾಗಿ ಅರಿಶಿನ ಬಳಕೆಯಿಂದ ರಕ್ತ ಶುದ್ಧವಾಗುತ್ತದೆ ಮತ್ತು ದೇಹದಲ್ಲಿ ಶಕ್ತಿ ಪರಿಚಲನೆಯಾಗುತ್ತದೆ.