Benefits of Walnuts: ಹೃದಯ ಆರೋಗ್ಯ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಾಲ್ನಟ್
)
ವಾಲ್ನಟ್‌ನಲ್ಲಿರುವ ವಿಟಮಿನ್ E, ಆಂಟಿ-ಆಕ್ಸಿಡೆಂಟ್ ಮೆದುಳಿನ ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಆಕ್ಸಿಡೇಟಿವ್ ಹಾನಿಯಿಂದ ಜೀವಕೋಶ ಪೊರೆಗಳನ್ನು ರಕ್ಷಿಸುವಲ್ಲಿ ಇದು ಪಾತ್ರ ವಹಿಸುತ್ತದೆ. ಮೆದುಳಿನ ಕೋಶಗಳ ದೀರ್ಘಾಯುಷ್ಯ & ಚೈತನ್ಯವನ್ನು ಉತ್ತೇಜಿಸುತ್ತದೆ.
)
ವಾಲ್ನಟ್ ಬೀಜಗಳಲ್ಲಿ ವಿಟಮಿನ್ B7 ಬಯೋಟಿನ್ ರೂಪದಲ್ಲಿ ಲಭ್ಯವಿದ್ದು, ನಮ್ಮ ತಲೆ ಕೂದಲಿನ ಕಿರು ಚೀಲಗಳನ್ನು ಅಭಿವೃದ್ಧಿಪಡಿಸುವಲ್ಲಿ ನೆರವಾಗುತ್ತದೆ. ಇದರಿಂದ ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಜೊತೆಗೆ ತಲೆ ಕೂದಲಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ. ತಲೆಕೂದಲು ಬೆಳೆಯಲು ಹಾಗೂ ಸೊಂಪಾಗಿ ಕಾಣಲು ವಾಲ್ನಟ್ ಬೀಜಗಳು ಸಹಾಯ ಮಾಡುತ್ತವೆ.
)
ನೀರಿನಲ್ಲಿ ರಾತ್ರಿ ನೆನೆ ಹಾಕಿದ ವಾಲ್ನಟ್ ಬೀಜಗಳನ್ನು ಬೆಳಗ್ಗೆ ಎದ್ದತಕ್ಷಣ ಸೇವಿಸುವುದರಿಂದ ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ ಮತ್ತು ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ವಾಲ್ನಟ್ ಬೀಜಗಳಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಇದ್ದು, ಇದು ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ರೆ ಮಾಡುವಂತೆ ಮಾಡುತ್ತದೆ. ವಾಲ್ನಟ್ ಬೀಜಗಳನ್ನು ನೆನೆ ಹಾಕಿ ಸೇವಿಸುವುದರಿಂದ ನಮ್ಮ ಸಂಪೂರ್ಣ ಆರೋಗ್ಯ ಉತ್ತಮಗೊಳ್ಳುತ್ತದೆ.
ವಾಲ್ನಟ್ ಬೀಜಗಳಲ್ಲಿ ಮೆಗ್ನೀಷಿಯಮ್, ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಪ್ರಮಾಣ ಹೇರಳವಾಗಿದ್ದು, ಇದರ ಸೇವನೆಯಿಂದ ಆರೋಗ್ಯಕರ ಮೂಳೆಗಳು ನಮ್ಮದಾಗುತ್ತದೆ. ಮೂಳೆಗಳಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಇದ್ದರೂ ಸಹ ದೂರವಾಗುತ್ತದೆ. ನಿಯಮಿತವಾಗಿ ವಾಲ್ನಟ್ ಸೇವನೆಯಿಂದ ಹೃದಯದ ಆರೋಗ್ಯವು ಸಹ ಚೆನ್ನಾಗಿರುತ್ತದೆ.
ವಿಟಮಿನ್ ಮತ್ತು ಆಂಟಿ-ಆಕ್ಸಿಡೆಂಟ್ ಅಂಶಗಳು ಇರುವಂತಹ ವಾಲ್ನಟ್ ಬೀಜಗಳನ್ನು ಸೇವಿಸುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಾಲ್ನಟ್ ಬೀಜಗಳಲ್ಲಿ ಜಿಂಕ್ ಮತ್ತು ವಿಟಮಿನ್ E ಸಮೃದ್ಧವಾಗಿದೆ. ಇದರ ಸೇವನೆಯಿಂದ ಆರೋಗ್ಯಕರ ರೋಗ ನಿರೋಧಕ ವ್ಯವಸ್ಥೆ ನಮ್ಮದಾಗುತ್ತದೆ. ಸೋಂಕುಗಳು ಹಾಗೂ ಅಸ್ವಸ್ಥತೆ ಪರಿಣಾಮಕಾರಿಯಾಗಿ ದೂರವಾಗುತ್ತದೆ.