Benefits of Cow Ghee: ಹಸುವಿನ ತುಪ್ಪ ಸೇವನೆಯ ಆರೋಗ್ಯ ಪ್ರಯೋಜನಗಳು
ಹಸುವಿನ ತುಪ್ಪವು ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ತುಪ್ಪದಲ್ಲಿ ಕೊಬ್ಬು ಅತಿ ಕಡಿಮೆ ಪ್ರಮಾಣದಲ್ಲಿದೆ. ಇದು ಮಕ್ಕಳು ಮತ್ತು ವಯಸ್ಕರಲ್ಲಿ ತೂಕ ಕಡಿಮೆ ಮಾಡಲು ಮತ್ತು ಬೊಜ್ಜು ಕಡಿಮೆ ಮಾಡಲು ಸಹಕಾರಿಯಾಗಿದೆ.

ಪ್ರತಿದಿನ ಮಕ್ಕಳಿಗೆ ಊಟದಲ್ಲಿ ಹಸುವಿನ ತುಪ್ಪವನ್ನು ತಿನ್ನಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳು ದಷ್ಟಪುಷ್ಟವಾಗಿ ಆರೋಗ್ಯದಿಂದ ಬೆಳೆಯುತ್ತಾರೆ.
ಮೈಗ್ರೇನ್ ಸಮಸ್ಯೆ ಹೊಂದಿರುವವರು ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ 2 ಹನಿ ತುಪ್ಪವನ್ನು ಮೂಗಿನ ಹೊಳ್ಳೆಗಳಿಗೆ ಹಾಕಿಕೊಂಡರೆ ತಲೆನೋವಿನಿಂದ ಮುಕ್ತಿ ಸಿಗುತ್ತದೆ.
ನಿಯಮಿತವಾಗಿ ತುಪ್ಪ ಸೇವಿಸುವುದರಿಂದ ತಲೆನೋವು, ದೃಷ್ಟಿಯ ಸಮಸ್ಯೆಗಳು ಕಾಡುವುದಿಲ್ಲ. 1 ಲೋಟ ಬೆಚ್ಚಗಿನ ಹಾಲಿಗೆ ಅರ್ಧ ಚಮಚ ತುಪ್ಪ ಮತ್ತು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಆಯಾಸದಂಥ ಸಮಸ್ಯೆಗಳು ದೂರವಾಗುತ್ತವೆ.