Health Tips: ಬೇವಿನ ಎಲೆಯ ನೀರಿನ ಸ್ನಾನದಿಂದ ತ್ವಚೆಗೆ ಸಿಗುವ ಅದ್ಭುತ ಪ್ರಯೋಜನಗಳು
ಬೇವಿನ ಎಲೆಗಳು ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ತುಂಬಾ ಪರಿಣಾಮಕಾರಿಯಾಗಿದೆ. ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ಮತ್ತು ಅದಕ್ಕೆ ೨ ಚಮಚ ಮೊಸರನ್ನು ಬೆರೆಸಿ ಮುಖದ ಮೇಲೆ ಹಚ್ಚಬೇಕು. ಇದು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.
ಅತಿಯಾದ ಬೆವರುವಿಕೆಗೆ ದೇಹದಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುವುದೇ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಬೇವಿನ ಸೊಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ಬೆವರಿನ ದುರ್ವಾಸನೆ ದೂರವಾಗಿ ತ್ವಚೆಯ ರಕ್ಷಣೆಯಾಗುತ್ತದೆ.
ವಾರಕ್ಕೊಮ್ಮೆ ಬೇವು ಅಥವಾ ಬೇವಿನ ಎಲೆಯ ನೀರಿನಿಂದ ತಲೆಗೆ ಸ್ನಾನ ಮಾಡುವುದರಿಂದ ಹೇನು & ತಲೆಹೊಟ್ಟು ನಿವಾರಣೆಯಾಗುತ್ತದೆ. ಬೇವಿನ ಎಲೆಯ ನೀರಿನ್ನು ಬಳಸುವಾಗ ಶಾಂಪೂ ಬಳಸದಿರುವುದು ಉತ್ತಮ. ದೇಹದಲ್ಲಿ ಗುಳ್ಳೆಗಳು & ಹುಣ್ಣುಗಳಿಂದ ಬಳಲುತ್ತಿರುವವರಿಗೆ ಬೇವಿನ ಎಲೆಯ ನೀರಿನ ಸ್ನಾನವು ರಾಮಬಾಣವಾಗಿದೆ. ಇದು ದೇಹದ ಮೇಲಿನ ಗುಳ್ಳೆಗಳು & ದದ್ದುಗಳ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಬೇವಿನ ಎಲೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಮೊಡವೆ ಸಮಸ್ಯೆಗಳು ನಿವಾರಣೆಯಾಗಿ ನಿಮ್ಮ ಮುಖ ಕಾಂತಿಯುತವಾಗುತ್ತದೆ. ಬೇವಿನ ಎಲೆಯ ನೀರಿನಿಂದ ಮುಖವನ್ನು ತೊಳೆದರೆ ಮುಖದ ಮೇಲೆ ನೈಸರ್ಗಿಕ ಹೊಳಪು ಕಾಣಬಹುದು. ಬೇವಿನ ಎಲೆಯ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ.
ಒಂದು ಪಾತ್ರೆ ಬಿಸಿನೀರಿನಲ್ಲಿ ಬೇವಿನ ಎಲೆಗಳನ್ನು ತೊಳೆದು ಹಾಕಿ ಅದರ ಬಣ್ಣ ಬಿಡುವವರೆಗೂ ಶೋಧಿಸಿ ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಬೇಕು. ವಾರದಲ್ಲಿ ಎರಡರಿಂದ ಮೂರು ಬಾರಿ ಈ ನೀರಿನಿಂದ ಸ್ನಾನ ಮಾಡಬೇಕು.