Health Tips: ಅಧಿಕ ಫೈಬರ್ ಹೊಂದಿರುವ ಅತ್ಯುತ್ತಮ ಆಹಾರಗಳು ಇಲ್ಲಿವೆ ನೋಡಿ
ದಿನಕ್ಕೊಂದು ಸೇಬು ತಿಂದರೆ ವೈದ್ಯರ ಅವಶ್ಯಕತೆ ಇರುವುದಿಲ್ಲವೆಂದು ಹೇಳಲಾಗುತ್ತದೆ. ಸೇಬು ಅಧಿಕ ಫೈಬರ್ ಹೊಂದಿರು ಹಣ್ಣಾಗಿದೆ. ಮಾಧ್ಯಮ ಗಾತ್ರದ ಒಂದು ಸೇಬಿನಲ್ಲಿ 4.4 ಗ್ರಾಂ ಫೈಬರ್ ಇರುತ್ತದೆ.
ನಿಯಮಿತವಾಗಿ ಬಾಳೆಹಣ್ಣು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಬಾಳೆಹಣ್ಣು ಸೇವಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಒಂದು ಬಾಳೆಹಣ್ಣಿನಲ್ಲಿ 3.1 ಗ್ರಾಂ ಫೈಬರ್ ಇರುತ್ತದೆ.
ಬ್ರಾಕಲಿ ಫೈಬರ್‍ನ ಸಮೃದ್ಧ ಮೂಲವಾಗಿದೆ. ಇದರಲ್ಲಿನ ಫೈಬರ್ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾಗಲು ಸಹಕಾರಿ. ಬ್ರಾಕಲಿ ಸೇವನೆಯಿಂದ ರಕ್ತದ LDL ಕಡಿಮೆಯಾಗಲಿದೆ. ಪ್ರತಿ 100 ಗ್ರಾಂ ಬ್ರಾಕಲಿಯಲ್ಲಿ 10.6 ಗ್ರಾಂ ಫೈವರ್ ಇರುತ್ತದೆ.
ಬಾದಾಮಿ ಸೇವನೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬಾದಾಮಿ ಹಲವು ರೋಗಗಳಿಗೆ ರಾಮಬಾಣವಾಗಿದೆ. ಪ್ರತಿ 100 ಗ್ರಾಂ ಬಾದಾಮಿಯಲ್ಲಿ 12.5 ಗ್ರಾಂ ಫೈವರ್ ಇರುತ್ತದೆ.
ಓಟ್ಸ್ ಸೇವನೆಯಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದು. ಓಟ್ಸ್ ಕೊಲೆಸ್ಟ್ರಾಲ್ ತಗ್ಗಿಸುತ್ತದೆ ಮತ್ತು ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ. ಪ್ರತಿ 100 ಗ್ರಾಂ ಓಟ್ಸ್‍ನಲ್ಲಿ 2.6 ಗ್ರಾಂನಷ್ಟು ಫೈಬರ್ ಇರುತ್ತದೆ.