Benefits Of Tulsi Water: ತುಳಸಿ ನೀರು ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ
ಪ್ರತಿದಿನ ಬೆಳಗ್ಗೆ ತುಳಸಿ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಬೆಳಗ್ಗೆ 1 ಲೋಟ ತುಳಸಿ ನೀರನ್ನು ಕುಡಿಯುವುದು ನೈಸರ್ಗಿಕವಾಗಿ ದೇಹದಲ್ಲಿ ಸಂಗ್ರಹವಾದ ಕಲ್ಮಶ ಮತ್ತು ವಿಷಗಳನ್ನು ಹೊರಹಾಕುತ್ತದೆ. ಇದು ನಮಗೆ ದೈನಂದಿನ ಡಿಟಾಕ್ಸ್ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ತುಳಸಿ ನೀರು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಕರಗಿಸಲು ಸಹಕಾರಿಯಾಗಿದೆ.
ತುಳಸಿ ಎಲೆಯು ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ನಿಮಗೆ ಅಜೀರ್ಣ ಮತ್ತು ಆಮ್ಲೀಯತೆಯ ಸಮಸ್ಯೆಗಳಿದ್ದರೆ ಪ್ರತಿದಿನ 2 ರಿಂದ 3 ತುಳಸಿ ಎಲೆಗಳನ್ನು ಅಗಿದು ಸೇವಿಸಿರಿ.
ತುಳಸಿ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿಬಯೋಟಿಕ್ ಗುಣಗಳು ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಪ್ರತಿದಿನ ಇದನ್ನು ಸೇವಿಸಿದ್ರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
ತುಳಸಿ ಎಲೆಗಳ ನೀರನ್ನು ತಯಾರಿಸಲು ಪಾತ್ರೆಯಲ್ಲಿ ಒಂದು ಲೋಟ ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು. ನೀರು ಕುದಿಯುವಾಗ ತುಳಸಿ ಎಲೆಗಳನ್ನು ಸೇರಿಸಬೇಕು. ಸ್ವಲ್ಪ ಹೊತ್ತು ಬಿಟ್ಟು ಅದನ್ನು ಒಂದೊಂದೇ ಗುಟುಕಿನಂತೆ ಸೇವಿಸಬೇಕು.