Health tips: ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಈ 5 ಆಹಾರ ಸೇವಿಸಿರಿ
ಆ್ಯಪಲ್ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದ ಆಹಾರವಾಗಿದೆ. ಇದರಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಹೀಗಾಗಿ ಮಧುಮೇಹ ನಿಯಂತ್ರಿಸಲು ಸೇಬು ಹಣ್ಣು ಸೇವಿಸಬಹುದು. ಸೇಬುಗಳು ವಿಟಮಿನ್ C ಮತ್ತು ಅನೇಕ ಫೈಟೊಕೆಮಿಕಲ್ಗಳನ್ನು ಹೊಂದಿರುತ್ತವೆ.
ಬಾದಾಮಿ ಪ್ರೋಟೀನ್ ಆಹಾರವಾಗಿದ್ದು, ಇದನ್ನು ಸೇವಿಸುವುದರಿಂದ ದೇಹವು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯುತ್ತದೆ. ಅದೇ ರೀತಿ ಹೆಚ್ಚಿನ ಸಕ್ಕರೆ ಕಡಿಮೆ ಮಾಡಲು ಬಾದಾಮಿ ಪ್ರಯೋಜನಕಾರಿ. ಬಾದಾಮಿ ಫೈಬರ್, ಪ್ರೋಟೀನ್ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ಮಧುಮೇಹವನ್ನು ನಿರ್ವಹಿಸುವಲ್ಲಿ ಬಹಳ ಪರಿಣಾಮಕಾರಿ.
ಪಾಲಕ್ ಸಹ ಪ್ರೋಟೀನ್ ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ. ಹೀಗಾಗಿ ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಪಾಲಕ್ ಸೇವಿಸಬಹುದು. ಪಾಲಕದಲ್ಲಿರುವ ಮೆಗ್ನೀಸಿಯಮ್ ಹಲವು ಸಂಶೋಧನೆಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ.
ಮಧುಮೇಹದಿಂದ ಮುಕ್ತಿ ಹೊಂದಬೇಕಾದರೆ ಉಪಾಹಾರದಲ್ಲಿ ಓಟ್ಸ್ ಸೇವಿಸಬೇಕು. ಓಟ್ಸ್ ಕಡಿಮೆ ಗ್ಲೈಸೆಮಿಕ್ ಆಹಾರ ಮಾತ್ರವಲ್ಲ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಫೈಬರ್ ಅನ್ನು ನೀಡುತ್ತದೆ. ನಿಯಮಿತವಾಗಿ ಓಟ್ಸ್ ಸೇವನೆಯಿಂದ ನೀವು ಹಲವಾರು ಪ್ರಯೋಜನ ಪಡೆಯುತ್ತೀರಿ.
ಅರಿಶಿನವು ಕರ್ಕ್ಯುಮಿನ್ ಅಂಶ ಹೊಂದಿರುತ್ತದೆ. ಇದು ಮೇದೋಜ್ಜೀರಕ ಗ್ರಂಥಿಯನ್ನು ಆರೋಗ್ಯಕರವಾಗಿರಿಸುತ್ತದೆ. ನಿಮ್ಮ ಮೇದೋಜ್ಜೀರಕ ಗ್ರಂಥಿಯು ಆರೋಗ್ಯಕರವಾಗಿದ್ದರೆ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಇನ್ಸುಲಿನ್ ಪ್ರಮಾಣವು ಸಮತೋಲಿತವಾಗಿರುತ್ತದೆ. ಇದರಿಂದ ಸಕ್ಕರೆ ಕಾಯಿಲೆ ನಿಮಗೆ ಹೆಚ್ಚು ಬಾಧಿಸುವುದಿಲ್ಲ.