Health Tips: ಥೈರಾಯ್ಡ್ ಸಮಸ್ಯೆಯಿಂದ ಈ ಕಾಯಿಲೆಗಳು ಬರುತ್ತವೆ ಹುಷಾರ್!
ಗಾಯಿಟರ್‌ಅನ್ನು ಗಳಗಂಡ ರೋಗ ಎಂತಲೂ ಕರೆಯುತ್ತಾರೆ. ಥೈರಾಯ್ಡ್ ಗ್ರಂಥಿಯು ದೊಡ್ಡದಾಗಿ ಬೆಳೆದು ಊದಿಕೊಳ್ಳುವ ಸ್ಥಿತಿಯೇ ಗಾಯಿಟರ್.
ಥೈರಾಯ್ಡ್ ಗ್ರಂಥಿಯು ಅಗತ್ಯಕ್ಕಿಂತ ಕಡಿಮೆ ಹಾರ್ಮೋನ್ ಉತ್ಪಾದನೆ ಮಾಡಿದಾಗ ಕಂಡುಬರುವ ಸಮಸ್ಯೆ. ಆಯಾಸ, ತೂಕ ಹೆಚ್ಚಾಗುವುದು, ಶೀತ ಅಸಹಿಷ್ಣುತೆ, ಒಣ ಚರ್ಮ, ಮಲಬದ್ಧತೆ ಮತ್ತು ಖಿನ್ನತೆ ಇದರ ಲಕ್ಷಣಗಳಾಗಿವೆ.
ಥೈರಾಯ್ಡ್ ಗ್ರಂಥಿ ಅಗತ್ಯಕ್ಕಿಂತ ಹೆಚ್ಚು ಹಾರ್ಮೋನ್ ಉತ್ಪಾದನೆ ಮಾಡಿದರೆ ಕಂಡುಬರುವ ಸಮಸ್ಯೆ. ಇದರ ಲಕ್ಷಣಗಳು ತೂಕ ನಷ್ಟ, ತ್ವರಿತ ಹೃದಯ ಬಡಿತ, ಕಿರಿಕಿರಿ, ಶಾಖವನ್ನು ಸಹಿಸದಿರುವುದು ಮತ್ತು ಆತಂಕ.
ಥೈರಾಯ್ಡ್ ಗ್ರಂಥಿಯಲ್ಲಿ ಊತ ಉಂಟಾಗಿ ಥೈರಾಕ್ಸಿನ್ ಹಾರ್ಮೋನಿನ ಸಂಗ್ರಹವು ರಕ್ತಕ್ಕೆ ಸೋರಿಕೆಯಾಗುವ ಸಾಧ್ಯತೆಗಳಿವೆ. ಈ ರೀತಿ ಆದಾಗ ರಕ್ತದಲ್ಲಿನ ಹಾರ್ಮೋನ್ ಮಟ್ಟ ಹೆಚ್ಚಾಗಬಹುದು.
ಕೆಲವೊಮ್ಮೆ ಸಾಮಾನ್ಯ ಗೆಡ್ಡೆಗಳಾಗಿರುತ್ತವೆ. ಕೆಲವೊಮ್ಮೆ ಇದರಿಂದ ಕ್ಯಾನ್ಸರ್ ಕೂಡ ಆಗಬಹುದು ಎಂದು ಹೇಳಲಾಗಿದೆ.