Health Tips: ಬೆಳಗಿನ ಉಪಾಹಾರದಲ್ಲಿ ಅಪ್ಪಿತಪ್ಪಿಯೂ ಈ 5 ಆಹಾರ ಸೇವಿಸಬೇಡಿ

Tue, 28 Mar 2023-7:29 pm,

ಹಲವರಿಗೆ ಬೆಳಗ್ಗೆ ಎದ್ದ ನಂತರ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದನ್ನು ಸೇವಿಸಿದ ನಂತರ ನೀವು ಉಲ್ಲಾಸಗೊಂಡರೂ ಸಹ, ಇದು ಆರೋಗ್ಯಕ್ಕೆ ಸ್ವಲ್ಪವೂ ಪ್ರಯೋಜನಕಾರಿಯಲ್ಲ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೊಟ್ಟೆ ತುಂಬಿದಾಗ ಮಾತ್ರ ಕಾಫಿ ಕುಡಿಯುವುದು ಒಳ್ಳೆಯದು.

ಬೆಳಗ್ಗೆ ಆಫೀಸ್‍ಗೆ ಹೋಗುವ ಆತುರದಲ್ಲಿ ನಾವು ಸಾಮಾನ್ಯವಾಗಿ ಟೀ, ಜಾಮ್ ಅಥವಾ ಬೆಣ್ಣೆಯೊಂದಿಗೆ ವೈಟ್ ಬ್ರೆಡ್ ತಿನ್ನಲು ಇಷ್ಟಪಡುತ್ತೇವೆ. ಆದರೆ ವೈಟ್ ಬ್ರೆಡ್ನಲ್ಲಿ ಪೋಷಕಾಂಶಗಳು ಕಡಿಮೆ ಮತ್ತು ಅದರ ಸೇವನೆಯು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಮಲ್ಟಿಗ್ರೇನ್ ಬ್ರೆಡ್ ಅನ್ನು ಬೆಳಗಿನ ಉಪಾಹಾರದ ಭಾಗವಾಗಿ ಮಾಡುವುದು ಉತ್ತಮ.

ಹಣ್ಣುಗಳು ಮತ್ತು ಅವುಗಳ ಜ್ಯೂಸ್ ಅನ್ನು ಬೆಳಗ್ಗೆ ಕುಡಿಯುವುದು ಯಾವಾಗಲೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಕೆಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ ಸೇವಿಸುತ್ತಾರೆ. ಈ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ, ಏಕೆಂದರೆ ಪ್ಯಾಕ್ ಮಾಡಿದ ಜ್ಯೂಸ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಸಂರಕ್ಷಕಗಳು ಮತ್ತು ಸಕ್ಕರೆ ಇರುತ್ತದೆ, ಇದು ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.

ಕಳೆದ ಕೆಲವು ವರ್ಷಗಳಿಂದ ಬೆಳಗಿನ ಉಪಾಹಾರದ ಸಮಯದಲ್ಲಿ ಸಿರಿಧಾನ್ಯಗಳನ್ನು ತಿನ್ನುವ ಪ್ರವೃತ್ತಿಯು ಬಹಳಷ್ಟು ಹೆಚ್ಚಾಗಿದೆ. ಆದರೆ ಇವುಗಳನ್ನು ಸಂಸ್ಕರಿಸಿ ತಯಾರಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿ ಧಾನ್ಯದ ಪ್ರಮಾಣ ಬಹಳ ಕಡಿಮೆ ಮತ್ತು ಸಕ್ಕರೆಯ ಪ್ರಮಾಣವು ಹೆಚ್ಚಿರುತ್ತದೆ. ಆದ್ದರಿಂದ ಇದು ಮಧುಮೇಹ, ಬೊಜ್ಜು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಬೆಳಗಿನ ಉಪಾಹಾರದಲ್ಲಿ ನೈಸರ್ಗಿಕ ಮೊಸರಿನ ಬದಲಿಗೆ ಸುವಾಸನೆಯುಕ್ತ ಮೊಸರು ತಿನ್ನುವ ಪ್ರವೃತ್ತಿಯು ಬಹಳಷ್ಟು ಹೆಚ್ಚಾಗಿದೆ. ಆದರೆ ಈ ಆಹಾರ ಪದಾರ್ಥವು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿದ್ದು, ಅದು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಇದನ್ನು ಬೆಳಗ್ಗೆ ಸೇವಿಸಬೇಡಿ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಪಾಲಿಸುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link