Health Tips: ಮಾರ್ನಿಂಗ್ ಟೀ ಕುಡಿಯುವಾಗ ಈ ತಪ್ಪುಗಳನ್ನು ಮಾಡಲೇಬಾರದು
ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಟೀ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ, ಬೆಳಿಗ್ಗೆ ಟೀ ಕುಡಿಯುವ ವೇಳೆ ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು. ಹಾಗಾಗಿ, ಮಾರ್ನಿಂಗ್ ಟೀ ಕುಡಿಯುವಾಗ ಈ ತಪ್ಪುಗಳಾಗದಂತೆ ನಿಗಾವಹಿಸಿ.
ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ: ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬಾರದು. ಇದು ಎದೆಯುರಿ, ಅಸಿಡಿಟಿ ಸಮಸ್ಯೆಗೆ ಕಾರಣವಾಗಬಹುದು.
ಆಹಾರ-ಪಾನೀಯದೊಂದಿಗೆ ಚಹಾ: ಆರೋಗ್ಯ ತಜ್ಞರ ಪ್ರಕಾರ, ಬೇರೆ ಆಹಾರ ಅಥವಾ ಪಾನೀಯದೊಂದಿಗೆ ಟೀ ಕುಡಿಯುವುದು ಕೆಲವರಿಗೆ ತಲೆ ನೋವಿಗೆ ಕಾರಣವಾಗಬಹುದು. ನಿಮಗೆ ಬೇಕೆಂದರೆ ನೀವು ಏನನ್ನಾದರೂ ತಿನ್ನುವ ಮೊದಲು ಇಲ್ಲವೇ ಆಹಾರ ಸೇವನೆಯ ಬಳಿಕ ಚಹಾ ಸೇವಿಸಿ.
ಪ್ಲಾಸ್ಟಿಕ್ ಕಪ್‌ಗಳಲ್ಲಿ ಚಹಾ: ಎಂದಿಗೂ ಸಹ ಪ್ಲಾಸ್ಟಿಕ್ ಕಪ್‌ಗಳಲ್ಲಿ ಚಹಾ ಕುಡಿಯುವ ತಪ್ಪನ್ನು ಮಾಡಬೇಡಿ. ಹಲವಾರು ರೋಗಗಳು ಬರುತ್ತವೆ ಮತ್ತು ನಿಮ್ಮ ಆರೋಗ್ಯವೂ ಹದಗೆಡಬಹುದು.
ಚಹಾದೊಂದಿಗೆ ನಿಂಬೆ ಸೇವನೆ: ನೀವು ಚಹಾದೊಂದಿಗೆ ನಿಂಬೆ ಅಥವಾ ನಿಂಬೆ ರಸದೊಂದಿಗೆ ಬೆರೆಸಿದ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಿ. ಇದು ಅಸಿಡಿಟಿ ಮತ್ತು ಅತಿಸಾರದ ಸಮಸ್ಯೆಗಳಿಗೆ ಕಾರಣವಾಗಬಹುದು.
ಚಹಾದೊಂದಿಗೆ ನೀರು: ನಮ್ಮಲ್ಲಿ ಕೆಲವರು ಟೀ ಕುಡಿದ ತಕ್ಷಣ ನೀರು ಕುಡಿಯುತ್ತಾರೆ. ಆದರೆ, ನಿಮ್ಮ ಈ ತಪ್ಪು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ, ಟೀ ಕುಡಿಯುವಾಗ ಈ ತಪ್ಪುಗಳಾಗದಂತೆ ನಿಗಾವಹಿಸಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.