Health Tips: ದೇಹದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದರೆ ಈ ರೀತಿ ಮಾಡಿ
ಅಮೃತ ಬಳ್ಳಿ & ಒಣಶುಂಠಿ ಸೇವನೆಯಿಂದ ಯೂರಿಕ್ ಆಸಿಡ್ ಶಮನ ಮಾಡಬಹುದು. ಇವುಗಳನ್ನು ಹಾಗೆಯೇ ತೆಗೆದುಕೊಂಡು ಅದರ ಚೂರ್ಣ ಮಾಡಿ ಬಳಕೆ ಮಾಡಬೇಕು.
ಆಫ್ ಟೀ ಸ್ಪೂನ್‌ನಷ್ಟು ಚೂರ್ಣ ತೆಗೆದುಕೊಂಡು ಜೇನುತುಪ್ಪದ ಜೊತೆಗೆ ಬೆರೆಸಿ ಸೇವನೆ ಮಾಡಬೇ. ಅಷ್ಟೇ ಅಲ್ಲ ಬಿಸಿ ನೀರಿನ ಜೊತೆಗೂ ಸೇವನೆ ಮಾಡಬಹುದು. ಈ ಮನೆಮದ್ದಿನಿಂದ ವಾತರಕ್ತದ ಸಮಸ್ಯೆಯೂ ಕಡಿಮೆಯಾಗುತ್ತದೆ.
ನಿಂಬೆ ಹಣ್ಣನ್ನು ಬಳಕೆ ಮಾಡುವುದರಿಂದಲೂ ಈ ಯೂರಿಕ್ ಆಸಿಡ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. 10-15 ಎಲೆ ಪುದೀನಾ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿರಿ. ಬಳಿಕ ಅದಕ್ಕೆ ಎರಡು ಹನಿ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ, ಪ್ರತಿದಿನ ಕುಡಿಯುವುದರಿಂದ ವಾತರಕ್ತ ಕಡಿಮೆಯಾಗಲಿದೆ.
ನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸುತ್ತಾ ಬಂದರೆ ದೇಹದ ಸಂಧುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗುವುದು. ನಿಂಬೆ & ಪುದಿನಾ ಎರಡೂ ನಿರ್ವಿಶೀಕರಣ & ಮೂತ್ರವರ್ಧಕ ಗುಣಲಕ್ಷಣಗಳನ್ನು ಒಳಗೊಂಡಿದೆ. ಹೀಗಾಗಿ ಯೂರಿಕ್ ಆಸಿಡ್ ಕರಗಿ ಮೂತ್ರದ ಮೂಲಕವೇ ದೇಹದಿಂದ ಹೊರ ಹೋಗುತ್ತದೆ. ಇದರಿಂದ ಕಿಡ್ನಿ ಸ್ಟೋನ್ ಭಯ ಸಹ ಇರುವುದಿಲ್ಲ.