Health Tips: ಖಾಲಿ ಹೊಟ್ಟೆಯಲ್ಲಿ ನುಗ್ಗೆಕಾಯಿ ನೀರು ಸೇವಿಸಿದ್ರೆ ಏನಾಗುತ್ತೆ ಗೊತ್ತಾ?
ನುಗ್ಗೆಕಾಯಿಯು ಕಿತ್ತಳೆಗಿಂತ 7 ಪಟ್ಟು ಹೆಚ್ಚು ವಿಟಮಿನ್ C, ಕ್ಯಾರೆಟ್‌ಗಿಂತ 10 ಪಟ್ಟು ಹೆಚ್ಚು ವಿಟಮಿನ್ A, ಹಾಲಿಗಿಂತ 17 ಪಟ್ಟು ಹೆಚ್ಚು ಕ್ಯಾಲ್ಸಿಯಂ, ಮೊಸರಿಗಿಂತ 9 ಪಟ್ಟು ಹೆಚ್ಚು ಪ್ರೋಟೀನ್, ಬಾಳೆಹಣ್ಣಿಗಿಂತ 15 ಪಟ್ಟು ಹೆಚ್ಚು ಪೊಟ್ಯಾಸಿಯಂ ಮತ್ತು 25 ಪಟ್ಟು ಹೆಚ್ಚು ಕಬ್ಬಿಣವನ್ನು ನೀಡುತ್ತದೆ. ನುಗ್ಗೆಕಾಯಿಯ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ತಯಾರಿಸಿ ಸೇವಿಸಬಹುದು.
ಖಾಲಿ ಹೊಟ್ಟೆಯಲ್ಲಿ ನುಗ್ಗೆಕಾಯಿ ನೀರು ಕುಡಿಯುವುದರಿಂದ ನೀವು ವಿವಿಧ ಕಾಯಿಲೆಗಳು ಮತ್ತು ಪೌಷ್ಟಿಕಾಂಶದ ಕೊರತೆಯಿಂದ ಮುಕ್ತಿ ಸಿಗುತ್ತದೆ. ವಿಟಮಿನ್ A, C, E, ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಜೀವಸತ್ವಗಳು, ಪೋಷಕಾಂಶಗಳು ಮತ್ತು ಖನಿಜಗಳನ್ನು ನುಗ್ಗೆಕಾಯಿ ಒಳಗೊಂಡಿದೆ.
ಕಡಿಮೆ ಹಿಮೋಗ್ಲೋಬಿನ್ ಹೊಂದಿದ್ದರೆ ಅಥವಾ ವಿಟಮಿನ್‌ಗಳ ಕೊರತೆಯಿಂದ ಬಳಲುತ್ತಿದ್ದರೆ, ಕೂದಲು ಉದುರುವಿಕೆ, ತೆಳುವಾದ ಮೂಳೆಗಳು ಅಥವಾ ಚರ್ಮದ ಸಮಸ್ಯೆಗಳನ್ನು ಅನುಭವಿಸಿದರೆ ನಿಮ್ಮ ದೈನಂದಿನ ಡಯಟ್‌ನಲ್ಲಿ ನುಗ್ಗೆಕಾಯಿ ನೀರನ್ನು ಸೇವಿಸಬೇಕು. ನುಗ್ಗೆಕಾಯಿ ನೀರು ಚಯಾಪಚಯವನ್ನು ಸುಧಾರಿಸುವುದರ ಜೊತೆಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.
ನುಗ್ಗೆಕಾಯಿ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ʼಸಿʼ ಯ ಸಮೃದ್ಧ ಮೂಲವಾಗಿದ್ದು, ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನುಗ್ಗೆಕಾಯಿ ಉರಿಯೂತದ ಗುಣಲಕ್ಷಣ, ಪಾಲಿಫಿನಾಲ್ ಮತ್ತು ಫ್ಲೇವನಾಯ್ಡ್‌ಗಳನ್ನು ಹೊಂದಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನುಗ್ಗೆಕಾಯಿ ಮಧುಮೇಹ ರೋಗಿಗಳಿಗೆ ಅತ್ಯುತ್ತಮವಾಗಿದೆ. ಏಕೆಂದರೆ ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ನುಗ್ಗೆಕಾಯಿ ನೀರನ್ನು ಸೇವಿಸಬೇಕು.