Health Tips: ದಿನಕ್ಕೆ 5 ಗಂಟೆಗಿಂತ ಕಡಿಮೆ ನಿದ್ದೆ ಮಾಡಿದ್ರೆ ಏನಾಗುತ್ತೆ ಗೊತ್ತಾ?
ಅತಿಯಾದ ಒತ್ತಡ ನಿದ್ರೆಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೀಗಾಗಿ ಒತ್ತಡ ನಿರ್ವಹಿಸಲು ಧ್ಯಾನ, ಯೋಗ, ಬೆಳಗ್ಗೆ ಹಾಗೂ ಸಂಜೆಯ ವಾಕಿಂಗ್ ಮಾಡಬೇಕು. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನೀವು ಸುಖ ನಿದ್ರೆ ಪಡೆಯಬಹುದು.
ಆರೋಗ್ಯಕರ ಜೀವನಕ್ಕೆ ವ್ಯಾಯಾಮ ಬಹಳಮುಖ್ಯ. ದಿನಕ್ಕೆ ಅರ್ಧಗಂಟೆಯ ವ್ಯಾಯಾಮ ಮಾಡುವುದು ದೇಹವನ್ನು ಆರೋಗ್ಯವಾಗಿಡುತ್ತದೆ. ಇದು ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಸೃಷ್ಟಿಸುತ್ತದೆ. ಇದರಿಂದ ನೀವು ಉತ್ತಮ ನಿದ್ರೆ ಪಡೆಯಬಹುದು. ಆದರೆ ವ್ಯಾಯಾಮದ ನಂತರ ಅಪ್ಪಿತಪ್ಪಿಯೂ ಮಲಗಬಾರದು.
ನಿದ್ರೆಯ ವಿಳಂಬವು ಸೆಲ್ಯುಲಾರ್ ಹಾನಿ, ಉರಿಯೂತ ಮತ್ತು ಹೃದ್ರೋಗದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಪ್ರತಿದಿನ ನಿಗದಿತ ಸಮಯಕ್ಕೆ ಮಲಗಿ ಉತ್ತಮ ನಿದ್ರೆ ಪಡೆಯಬೇಕು. ಇದು ನಿಮ್ಮ ಆರೋಗ್ಯಕ್ಕೆ ತುಂಬಾನೇ ಮುಖ್ಯ. ನಿದ್ರೆ ಮಾಡುವುದರಿಂದ ನೀವು ಆರೋಗ್ಯಕರ ಜೀವನ ಪಡೆಯಬಹುದು.
ಮಲಗುವ ಮುನ್ನ ಫೋನ್ ಬಳಸುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಫೋನ್ ಮೂಲಕ ಹೊರಸೂಸುವ ನೀಲಿ ಬೆಳಕು ನಿಮ್ಮ ನಿದ್ರೆಗೆ ಭಂಗ ತರುತ್ತದೆ. ಫೋನ್ ಬಳಕೆಯಿಂದ ಮೆದುಳಿಗೆ ವಿಶ್ರಾಂತಿ ದೊರೆಯುವುದಿಲ್ಲ. ಹೀಗಾಗಿ ಮಲಗುವ ಒಂದು ಗಂಟೆ ಮೊದಲು ಫೋನ್ ಬಳಕೆ ನಿಲ್ಲಿಸಿ.
ಆರೋಗ್ಯಕರ ಜೀವನಕ್ಕೆ ನಿದ್ರೆ ತುಂಬಾನೇ ಮುಖ್ಯ. ಹೀಗಾಗಿ ಪ್ರತಿದಿನ ಕನಿಷ್ಠ 6-8 ಗಂಟೆ ನಿದ್ರೆ ಮಾಡುವುದು ಅವಶ್ಯಕ. ನಿದ್ರೆಯಲ್ಲಿ ಆಗುವ ಏರು-ಪೇರು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಿದ್ರೆಗೆ ಒಂದು ಸಮಯವನ್ನು ನಿಗದಿಪಡಿಸಿ, ಆ ವೇಳೆಗೆ ಸರಿಯಾಗಿ ನಿದ್ರಿಸುವುದು ರೂಢಿಸಿಕೊಳ್ಳಿರಿ. ಇದು ನಿಮ್ಮ ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.