Health Tips: ಸುಖನಿದ್ರೆಗೆ ಏನು ಮಾಡಬೇಕು ಗೊತ್ತಾ..?
ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗಬೇಕು. ನಿದ್ದೆ ಮಾಡುವ 3 ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ.
ಮಲಗುವ ಹಾಸಿಗೆಯು ಅತಿಗಟ್ಟಿಯಾಗಿಯೂ ಮತ್ತು ಮೆತ್ತಗಾಗಿಯೂ ಇರಬಾರದು.
ಮಲಗುವ ಕೋಣೆ ಶಾಂತವಾಗಿದ್ದು, ಗಾಳಿ ಬೆಳಕಾಡುವಂತಿರಬೇಕು. ಮಲಗುವ ಮುನ್ನ ಸ್ನಾನ ಅಥವಾ ಕೈಕಾಲು ತೊಳೆದು ಮಲಗಬೇಕು.
ಆರೋಗ್ಯವಂತ ಮನುಷ್ಯನಿಗೆ 6-8 ಗಂಟೆಗಳ ನಿದ್ದೆ ಅವಶ್ಯವಿರುತ್ತದೆ. ಅಷ್ಟೇ ಅಲ್ಲ ವಯಸ್ಸಿಗೆ ಅನುಗುಣವಾಗಿ ನಿದ್ದೆಯು ಬೇಕಾಗುತ್ತದೆ.
1 ತಿಂಗಳ ಮಗುವಿಗೆ 21 ಗಂಟೆ, 6 ತಿಂಗಳ ಮಗುವಿಗೆ 18 ಗಂಟೆ, 1 ವರ್ಷದ ಮಗುವಿಗೆ 12 ಗಂಟೆ, 4 ವರ್ಷದ ಮಗುವಿಗೆ 11 ಗಂಟೆ, 12 ವರ್ಷ ಮೇಲ್ಪಟ್ಟವರಿಗೆ 10 ಗಂಟೆ, 16 ವರ್ಷದವರಿಗೆ 8 ಗಂಟೆ ಮತ್ತು 30 ವರ್ಷ ಮೇಲ್ಪಟ್ಟವರಿಗೆ 6-8 ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆಯಿರುತ್ತದೆ.