Health Tips: ಪ್ರತಿದಿನವೂ ಸ್ಟ್ರಾಂಗ್ ಕಾಫಿ ಕುಡಿದರೆ ಮಲಬದ್ಧತೆಯಿಂದ ಮುಕ್ತಿ ದೊರೆಯುತ್ತದೆ!
ಕಾಫಿಯಲ್ಲಿ ಕೆಫಿನ್ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಇದು ದೇಹದಲ್ಲಿ ಕರುಳಿನ ಚಲನೆಯನ್ನು ಉತ್ತಮಗೊಳಿಸುವ ಮೂಲಕ ಹೊಟ್ಟೆಯ ಭಾಗದ ಮಾಂಸ - ಖಂಡಗಳನ್ನು ಸಡಿಲಗೊಳಿಸುತ್ತದೆ. ಇದರಿಂದ ತಾನಾಗಿಯೇ ಮಲಬದ್ಧತೆ ಸಮಸ್ಯೆ ಬಗೆಹರಿಯುತ್ತದೆ.
ಪ್ರತಿದಿನವೂ ಮಿಸ್ ಮಾಡದೆ ಸ್ಟ್ರಾಂಗ್ ಕಾಫಿ ಕುಡಿಯುವುದರಿಂದ ಮಲ ವಿಸರ್ಜನೆ ಸರಾಗವಾಗಿ ನಡೆದು ಕರುಳಿನ ಭಾಗದಲ್ಲಿ ಎಲ್ಲಿಯೂ ಸಹ ಮಲ ಗಟ್ಟಿ ಆಗದಂತೆ ಮತ್ತು ಅಲ್ಲೇ ಉಳಿದುಕೊಳ್ಳದಂತೆ ನೋಡಿಕೊಳ್ಳುತ್ತದೆ.
ಒಂದು ಅಧ್ಯಯನ ಹೇಳುವ ಪ್ರಕಾರ, ಮಲಬದ್ಧತೆ ಸಮಸ್ಯೆಗೆ ನೀವು ಸೇವನೆ ಮಾಡುವ ಆಹಾರ ಪದಾರ್ಥಗಳಿಗೆ ಸರಿಸಮಾನವಾಗಿ ನೀವು ಕುಡಿಯುವ ಒಂದು ಕಪ್ ಕಾಫಿ ಕೂಡ ಉತ್ತಮ ರೀತಿ ಕೆಲಸ ಮಾಡುತ್ತದೆ.
ಕಾಫಿಯನ್ನು ಯಾವುದೇ ಕಾರಣಕ್ಕೂ ಅತಿಯಾಗಿ ಸೇವನೆ ಮಾಡಲು ಹೋಗಬಾರದು. ಇದರಿಂದ ನಿಮ್ಮ ದೇಹದ ನಿರ್ಜಲೀಕರಣ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕಾಫಿ ಕುಡಿದ ನಂತರ ಸಾಕಷ್ಟು ನೀರು ಕುಡಿಯುವುದನ್ನು ಮರೆಯಬಾರದು.
ಬೆಳಗ್ಗೆ ಒಂದು ಕಪ್ ಕಾಫಿ ಅಥವಾ ಚಹಾವನ್ನು ಕುಡಿಯುವುದರಿಂದ ಅದರ ಕೆಫೀನ್ ಅಂಶದಿಂದಾಗಿ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.