Health Tips: ತಾಮ್ರದ ಪಾತ್ರೆಯಲ್ಲಿ ನೀರು ಕುಡಿದ್ರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ
ತಾಮ್ರದ ಪಾತ್ರೆಯಲ್ಲಿನ ನೀರು ಕುಡಿಯುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಇದರಿಂದ ವಾತ, ಕಫ, ಪಿತ್ತ ನಿವಾರಣೆಯಾಗುತ್ತದೆ.
ತಾಮ್ರದ ಪಾತ್ರೆಯಲ್ಲಿನ ನೀರು ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ಅತಿಸಾರ, ಭೇದಿ, ಕಾಮಾಲೆ ವಿರುದ್ಧವೂ ಹೋರಾಡುತ್ತದೆ. ತಾಮ್ರದಲ್ಲಿ ನಂಜುನಿರೋಧಕ ಗುಣಗಳಿದ್ದು, ಇದು ಗಾಯಗಳನ್ನು ಗುಣಪಡಿಸುವಲ್ಲಿ ಸಹಕಾರಿಯಾಗಿದೆ.
ತಾಮ್ರವು ಜೀರ್ಣಕ್ರಿಯೆಗೆ ಸಹಕಾರಿ. ಹೀಗಾಗಿ ತಾಮ್ರದ ಪಾತ್ರೆಯಲ್ಲಿನ ನೀರು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
ತಾಮ್ರವು ಕ್ಯಾನ್ಸರ್ ಹಾಗೂ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ. ತಾಮ್ರ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ, ಇದರಿಂದ ವಯಸ್ಸಾಗುವಿಕೆಯನ್ನು ತಡೆಗಟ್ಟಬಹುದು.
ಪ್ರತಿದಿನ ತಾಮ್ರದ ಪಾತ್ರೆಯ ನೀರು ಕುಡಿಯುವುದು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುತ್ತದೆ. ತಾಮ್ರವು ರಕ್ತಹೀನತೆಯನ್ನೂ ತಡೆಯುತ್ತದೆ. ದೇಹದಲ್ಲಿನ ಕೊಬ್ಬು ಕರಗಿಸಲೂ ಇದು ಸಹಕಾರಿಯಾಗಿದ್ದು, ತೂಕವೂ ನಷ್ಟವಾಗುತ್ತದೆ.