Health Tips: ತೂಕ ನಷ್ಟ & ಜೀರ್ಣಕ್ರಿಯೆಗೆ ಆರೋಗ್ಯದ ನಿಧಿ ಮಖಾನ ಸೇವಿಸಿ
ಗ್ಯಾಲಿಕ್ ಆಮ್ಲ, ಕ್ಲೋರೊಜೆನಿಕ್ ಆಮ್ಲ ಮತ್ತು ಎಪಿಕಾಟೆಚಿನ್‌ನಂತಹ ರೋಗ ನಿರೋಧಕಗಳು ಮಖಾನಾದಲ್ಲಿ ಹೇರಳವಾಗಿ ಇರುತ್ತವೆ. ಮಖಾನಾ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಕೆಲವು ಸಂದರ್ಭದಲ್ಲಿ ನಾವು ಅದರ ಸೇವನೆಯನ್ನು ತಪ್ಪಿಸಬೇಕು.
ನೀವು ಮಧುಮೇಹ ರೋಗಿಗಳಾಗಿದ್ದರೆ, ನೀವು ಆರೋಗ್ಯಕರ ತಿಂಡಿಯಾಗಿ ಮಖಾನಾವನ್ನು ತಿನ್ನಬಹುದು. ಮಖಾನಾ ಫೈಬರ್ ಭರಿತ ಆಹಾರದ ವರ್ಗದಲ್ಲಿ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದರೆ ನೀವು ಇದನ್ನು ಸೇವಿಸಬಹುದು.
ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಮಖಾನಾದಲ್ಲಿ ಕಂಡುಬರುತ್ತದೆ. ಇದು ನಮ್ಮ ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಖಾನಾವು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ನಿಮಗೆ ಅತಿಸಾರದ ಸಮಸ್ಯೆ ಇದ್ದರೆ ಮಖಾನಾವನ್ನು ಸೇವಿಸುವುದನ್ನು ಆದಷ್ಟು ತಪ್ಪಿಸಬೇಕು.
ನಿಮಗೆ ಮೂತ್ರಪಿಂಡದ ಸಮಸ್ಯೆ ಅಥವಾ ಕಿಡ್ನಿಸ್ಟೋನ್ ಸಮಸ್ಯೆ ಇದ್ದರೆ ನೀವು ಮಖಾನಾವನ್ನು ಸೇವಿಸುವುದನ್ನು ತಪ್ಪಿಸಬೇಕು. ಹೆಚ್ಚು ಉಪ್ಪು ಸೇರಿಸಿ ಮಖಾನಾ ಸೇವಿಸಬೇಡಿ. ಹೀಗೆ ಮಾಡುವುದರಿಂದ ನಿಮ್ಮ ರಕ್ತದೊತ್ತಡ ವೇಗವಾಗಿ ಹೆಚ್ಚುತ್ತದೆ.