Health Tips: ಉತ್ತಮ ಆರೋಗ್ಯ ಪಡೆಯಲು ಈ ಆಹಾರ ಸೇವಿಸಿ
ನಮ್ಮ ದೇಹಕ್ಕೆ ಒಮೆಗಾ3 ಅತಿ ಅಗತ್ಯವಾದ ಪೋಷಕಾಂಶ. ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಬಹುದು. ಹೀಗಾಗಿ ನೀವು ಒಮೆಗಾ3 ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.
ನೀವು ಸೇವಿಸುವ ಆಹಾರದಲ್ಲಿ ಚಿಯಾ ಬೀಜಗಳು, ಅಗಸೆಬೀಜಗಳನ್ನು ಹೆಚ್ಚಾಗಿ ಸೇರಿಸಿಕೊಳ್ಳಬೇಕು. ಹಸಿರು ತರಕಾರಿಗಳು ಮತ್ತು ಸೊಪ್ಪುಗಳನ್ನು ಹೆಚ್ಚಾಗಿ ತಿನ್ನಬೇಕು.
ಹಸಿವು ಆದಾಗ ವಾಲ್ ನಟ್ಸ್, ಬಾದಾಮಿ, ಬೆರಿ ಹಣ್ಣುಗಳು ಮುಂತಾದವುಗಳನ್ನು ಹೆಚ್ಚಾಗಿ ಸೇವಿಸಬೇಕು. ಒಣಹಣ್ಣು ಅಥವಾ ಡ್ರೈಫ್ರುಟ್ಸ್ ಸೇವನೆಯಿಂದಲೂ ನೀವು ಉತ್ತಮ ಆರೋಗ್ಯ ಪಡೆಯಬಹುದು.
ಸೀಫುಡ್ ಆದ ಮೀನುಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಲ್ಲಿ ಒಮೆಗಾ 3 ಸಮೃದ್ಧವಾಗಿರುತ್ತದೆ. ಪ್ರತಿದಿನವೂ ಒಂದು ಮೊಟ್ಟೆಯನ್ನು ಸೇವಿಸುವುದು ಸಹ ಉತ್ತಮ.