Health Tips: ನಿಮ್ಮ ಲೈಂಗಿಕ ಶಕ್ತಿ ಹೆಚ್ಚಾಗಬೇಕಾದರೆ ಈ ಬೀಜಗಳನ್ನು ಸೇವಿಸಿರಿ
ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಅಂಶದ ಪ್ರಮಾಣ ಹೆಚ್ಚಾಗಿದ್ದು, ಇದು ನಿಮ್ಮ ಆರೋಗ್ಯಕರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡಬಲ್ಲದು. ಪುರುಷರು ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆ. ಇದರ ಜೊತೆಗೆ ಪ್ರೋಸ್ಟೇಟ್ ಕ್ಯಾನ್ಸರ್ ಸಮಸ್ಯೆ ಇರುವುದಿಲ್ಲ. ಇದರಲ್ಲಿ ಒಮೆಗಾ -3 ಫ್ಯಾಟಿ ಆಸಿಡ್ ಅಂಶಗಳು ಪ್ರಮಾಣ ಹೆಚ್ಚಾಗಿದ್ದು, ಪುರುಷರಿಗೆ ಲೈಂಗಿಕ ಆಸಕ್ತಿ ಹೆಚ್ಚಾಗಲು ನೆರವಾಗುತ್ತದೆ.
ಎಳ್ಳಿನಲ್ಲಿ ಆಂಟಿ-ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿದೆ. ಈ ಕಾರಣದಿಂದ ಫ್ರೀ ರಾಡಿಕಲ್ ಅಂಶಗಳು ವೀರ್ಯಾಣುಗಳ ಗುಣಮಟ್ಟದ ಮೇಲೆ ಹಾನಿ ಮಾಡುವ ಪ್ರಭಾವ ತಪ್ಪುತ್ತದೆ. ಹೀಗಾಗಿ ವೀರ್ಯಾಣುಗಳ ಸಂಖ್ಯೆಯಲ್ಲಿ ಕಡಿಮೆಯಾಗುವುದಿಲ್ಲ. ಆರೋಗ್ಯಕರ ವೀರ್ಯಾಣುಗಳ ಚಲನೆ ಇರಲಿದ್ದು, ಪುರುಷರ ನಪುಂಸಕತ್ವ ದೂರವಾಗಲು ಇದು ಅನುಕೂಲವಾಗುತ್ತದೆ.
ಓಂ ಕಾಳುಗಳಲ್ಲಿ ಕೇವಲ ದೇಹದ ತಾಪಮಾನ ಮಾತ್ರವಲ್ಲ, ಪುರುಷರ ಲೈಂಗಿಕ ಆರೋಗ್ಯವನ್ನು ಕಾಪಾಡುವ ಗುಣವಿದೆ. ಪುರುಷರಲ್ಲಿ ಉಂಟಾಗುವ ಶೀಘ್ರಸ್ಕಲನ ಸಮಸ್ಯೆಗೆ ಪರಿಹಾರ ನೀಡಿ ದೀರ್ಘಕಾಲದವರೆಗೆ ಲೈಂಗಿಕ ತೃಪ್ತಿಯನ್ನು ಹೊಂದುವಂತೆ ಮಾಡುತ್ತದೆ.
ಜೀರಿಗೆ ಕಾಳುಗಳಲ್ಲಿ ಲೈಂಗಿಕ ಆಸಕ್ತಿ ಹೆಚ್ಚು ಮಾಡುವ ಖನಿಜಾಂಶಗಳು ಸಾಕಷ್ಟು ಕಂಡುಬರುತ್ತವೆ. ಇದರಲ್ಲಿ ಪೊಟ್ಯಾಷಿಯಂ ಅಂಶ ಹೆಚ್ಚಾಗಿ ಸಿಗುವುದರಿಂದ ಪುರುಷರು ತಮ್ಮ ಸಂಗಾತಿಯ ಬಳಿ ದೀರ್ಘಕಾಲದವರೆಗೆ ತಮ್ಮ ಲೈಂಗಿಕ ತೃಪ್ತಿ ಅನುಭವಿಸಲು ಅನುಕೂಲವಾಗುತ್ತದೆ. ಇದರಲ್ಲಿರುವ ಜಿಂಕ್ ಅಂಶ ವೀರ್ಯಾಣುಗಳ ಉತ್ಪತ್ತಿಯಲ್ಲಿ ನೆರವಾದರೆ, ಪೊಟ್ಯಾಷಿಯಂ ಅಂಶ ಆರೋಗ್ಯಕರ ಹೃದಯ ಬಡಿತ ಮತ್ತು ರಕ್ತದ ಒತ್ತಡದಲ್ಲಿ ನೆರವಾಗುತ್ತದೆ. ಸಾಕಷ್ಟು ಪುರುಷರಲ್ಲಿ ಕಂಡುಬರುವ ಲೈಂಗಿಕ ಸಾಮರ್ಥ್ಯದ ಸಮಸ್ಯೆಯನ್ನು ಜೀರಿಗೆ ಕಾಳುಗಳು ಸುಲಭವಾಗಿ ಬಗೆಹರಿಸುತ್ತವೆ. ವೀರ್ಯಾಣುಗಳ ಗುಣಮಟ್ಟ & ಸಂತತಿಯನ್ನು ಹೆಚ್ಚು ಮಾಡುವಲ್ಲಿ ಜೀರಿಗೆ ಕಾಳುಗಳ ಪಾತ್ರ ಬಹಳ ದೊಡ್ಡದು.
ಕಲ್ಲಂಗಡಿ ಹಣ್ಣು ಅಧಿಕ ನೀರಿನಾಂಶವನ್ನು ಹೊಂದಿರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದು, ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಿಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಕಲ್ಲಂಗಡಿ ಹಣ್ಣು ಸೇವನೆಯಿಂದ ನಿಮ್ಮಲ್ಲಿ ಲೈಂಗಿಕ ಆಸಕ್ತಿ ಹೆಚ್ಚುತ್ತದೆ. ಕಲ್ಲಂಗಡಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.